Kannada NewsKarnataka News

ಸಿರಿಗನ್ನಡ ಗೌರವ ಹಾಗೂ ಸಿರಿಗನ್ನಡ ಪುಸ್ತಕ ಪ್ರಶಸ್ತಿ ಪ್ರಕಟ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ  – ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನವು ೨೦೧೯ ಸಾಲಿನ ಸಿರಿಗನ್ನಡ ಗೌರವ ಹಾಗೂ ಸಿರಿಗನ್ನಡ ಪುಸ್ತಕ ಪ್ರಶಸ್ತಿಯನ್ನು ಪ್ರಕಟಿಸಿದೆ.

ಸಿರಿಗನ್ನಡ ಗೌರವ ಪ್ರಶಸ್ತಿಗೆ ಹಿರಿಯ ಪತ್ರಕರ್ತ, ಸಾಹಿತಿ ಎಲ್. ಎಸ್. ಶಾಸ್ತ್ರಿ ಹಾಗೂ ಕನ್ನಡ ಹೋರಾಟಗಾರರಾದ ಅಶೋಕ ಚಂದರಗಿ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

Home add -Advt

ಸಿರಿಗನ್ನಡ ಪುಸ್ತಕ ಪ್ರಶಸ್ತಿಗೆ ಡಾ. ನೀತಾ ರಾವ್ ಅವರ ಹತ್ತನೇ ಕ್ಲಾಸಿನ ಹುಡುಗಿಯರು ಲಲಿತ ಪ್ರಬಂಧ ಸಂಕಲನ ಮತ್ತು ನದೀಮ ಸನದಿ ಅವರ ಹುಲಿಯ ನೆತ್ತಿಗೆ ನೆರಳು ಕವನ ಸಂಕಲನ ಆಯ್ಕೆಯಾಗಿವೆ.

ದತ್ತಿನಿಧಿ ಪ್ರಶಸ್ತಿಗಳಾದ ಪ್ರೊ. ಪಿ. ಕೆ. ಬಾಗೋಜಿ ಷಷ್ಠಬ್ಧಿ ಸಮಿತಿ ದತ್ತಿನಿಧಿ ಪ್ರಶಸ್ತಿ – ಜೀವಮಾನ ಸಾಧನೆಗಾಗಿ ಪುರುಷ ವಿಭಾಗಕ್ಕೆ ಲೇಖಕರು, ಪ್ರಕಾಶಕರಾದ ಸಿದ್ದಣ್ಣ ಉತ್ನಾಳರಿಗೆ, ದಿ. ಸೌ ಸುಮನ ಗುರುನಾಥ ಹುದಲಿ ದತ್ತಿನಿಧಿ ಪ್ರಶಸ್ತಿ (ಮಹಿಳೆಯರಿಗಾಗಿ) ಸಾಮಾಜಿಕ ಕಾರ್ಯಕರ್ತೆ  ಶೀಲಾ ದೇಶಪಾಂಡೆ, ಜಿಲ್ಲೆಯ ಲೇಖಕಿರಿಗೆ ಜೀವಮಾನ ಸಾಧನೆಗಾಗಿ ನೀಡುವ ಡಾ. ಲತ್ತಾ ಗುತ್ತಿ ದತ್ತಿನಿಧಿ ಪ್ರಶಸ್ತಿಯು ಡಾ. ಗುರುದೇವಿ ಹುಲೆಪ್ಪನವರಮಠ, ಶ್ರೇಷ್ಠ ಶಿಕ್ಷಕ ಸಾಹಿತಿಗಾಗಿ ನೀಡುವ ದಿ. ವೆಂ. ಲ. ಜೋಶಿ ಸ್ಮಾರಕ ದತ್ತಿನಿಧಿ ಪ್ರಶಸ್ತಿ ಡಾ. ಪಿ. ಜಿ. ಕೆಂಪಣ್ಣವರ, ಬೆಳಗಾವಿಯ ಸಂಗೀತ ಪ್ರತಿಷ್ಠಾನವು ನೀಡುವ ವೇಣುನಾದ ಸಂಗೀತ ಪ್ರಶಸ್ತಿ ಯು ಜಿಲ್ಲೆಯ ಹಿರಿಯ ಸಂಗೀತಗಾರ  ಜಿ. ಎ. ಕುಲಕರ್ಣಿ (ಬಂಡುಮಾಸ್ತರ), ಪ್ರಕಾಶಕರಿಗೆ ನೀಡುವ   ತಾರಾಮತಿ ಪರ್ವತರಾಜ ಪಾಟೀಲ ದತ್ತಿನಿಧಿ ಪ್ರಶಸ್ತಿಯು ಬೆಳಗಾವಿಯ ಆದಿತ್ಯ ಪ್ರಕಾಶನಕ್ಕೆ ನೀಡಲಾಗಿದೆ.
ಕೆ. ಚಂದ್ರಮೌಳಿ ದತ್ತಿನಿಧಿ ಪ್ರಶಸ್ತಿಯು  ಈರಯ್ಯ ಕಿಲ್ಲೇದಾರ ರಚಿಸಿರುವ ಬದನೆ ಪುರಾಣ ಲಲಿತ ಪ್ರಬಂಧಕ್ಕೆ, ದಿ. ಹಣಮಂತರಾವ ಸವಣೂರ ದತ್ತಿನಿಧಿ ಪ್ರಶಸ್ತಿಯು ಡಾ. ಬಸು ಬೇವಿನಗಿಡದ ರಚಿಸಿರುವ ನೆರಳಿಲ್ಲದ ಮರ ಕಥಾಸಂಕಲನಕ್ಕೆ,  ಎಸ್. ಎಂ. ಕುಲಕಣ ಷಷ್ಠಬ್ಧಿ ಸಮಿತಿ ದತ್ತಿನಿಧಿ ಪ್ರಶಸ್ತಿಯು  ನಾಗೇಶ ನಾಯಕ ರಚಿಸಿರುವ ಬಯಲ ಕನ್ನಡಿ ವೈಚಾರಿಕ ಲೇಖನಗಳ ಸಂಕಲನಕ್ಕೆ, ದಿ. ಚಂದ್ರವ್ವ ಧರ್ಮಾಜಿ ಅನಿಗೋಳ ದತ್ತಿನಿಧಿ ಪ್ರಶಸ್ತಿಯು  ಸುನಂದಾ ಎಮ್ಮಿ ಅವರ ಪದ್ಮಾವತಿ: ಒಂದು ವಿಸ್ಮಯ ಸೃಜನೇತರ ಕೃತಿಗೆ, ಶಿವಕವಿ ಉಳವೀಶ ಹುಲೆಪ್ಪನವರಮಠ ದತ್ತಿನಿಧಿ ಪ್ರಶಸ್ತಿಯು ಚಂದ್ರಶೇಖರ ಯಲ್ಲಪ್ಪ ಪೂಜಾರ ರಚನೆಯ ಚೆಂಬೆಳಕ ದಾರಿಯಲ್ಲಿ ಚುಟುಕು ಸಾಹಿತ್ಯ ಸಂಕಲನಕ್ಕೆ,  ಅಪ್ಪಾಸಾಹೇಬ ಸದರಜೋಶಿ ಮತ್ತು ಕುಟುಂಬ ದತ್ತಿನಿಧಿ ಪ್ರಶಸ್ತಿಯು ಡಾ. ಹೇಮಾವತಿ ಸೊನೊಳ್ಳಿ ಸ್ಪಂದನ ವೈಚಾರಿಕ ಲೇಖನಗಳ ಸಂಕಲನಕ್ಕೆ ಲಭಿಸಿವೆ.
ಕಲಬುರ್ಗಿಯ ಡಾ. ಲಕ್ಷ್ಮೀಶಂಕರ ಜೋಶಿ ಹಾಗೂ ಬನಹಟ್ಟಿಯ ಪ್ರೊ. ಮಲ್ಲಿಕಾರ್ಜುನ ಹುಲಗಬಾಳಿ ಪ್ರಶಸ್ತಿಗಾಗಿ ಪುಸ್ತಕಗಳನ್ನು ಮೌಲ್ಯ ಮಾಪನ ಮಾಡಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭದ ಸ್ಥಳ ದಿನಾಂಕ ಎಲ್ಲ ವಿವರಗಳನ್ನು ನಂತರ ವಿಜೇತರಿಗೆ ತಿಳಿಸಲಾಗುವುದೆಂದು ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ತರಳುಬಾಳು ಹುಣ್ಣಿಮೆ ಮಹೋತ್ಸವ ಸಮಾರಂಭದಲ್ಲಿ ಸಿಎಂ ಭಾವುಕರಾಗಿದ್ದೇಕೆ?

Related Articles

Back to top button