*ಹಳ್ಳಿಕೊಪ್ಪ ಅರಣ್ಯ ಪ್ರದೇಶದಲ್ಲಿ ವ್ಯಕ್ತಿ ಶವ ಪತ್ತೆ ಪ್ರಕರಣ; 3 ಆರೋಪಿಗಳು ಅರೆಸ್ಟ್*
ಪ್ರಗತಿವಾಹಿನಿ ಸುದ್ದಿ; ಶಿರಸಿ: ಹಳ್ಳಿಕೊಪ್ಪ ಅರಣ್ಯ ಪ್ರದೇಶದಲ್ಲಿ ವ್ಯಕ್ತಿಯೋರ್ವನ ಶವ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬನವಾಸಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹಳ್ಳಿಕೊಪ್ಪ ಅರಣ್ಯ ಪ್ರದೇಶದಲ್ಲಿ ವ್ಯಕ್ತಿಯೋರ್ವನನ್ನು ಕೊಂದು ಶವವನ್ನು ಇಂಗು ಗುಂಡಿಯಲ್ಲಿ ಅರೆಬರೆ ಮುಚ್ಚಿ ಹೋಗಿದ್ದ ಘಟನೆ ಎರಡು ದಿನಗಳ ಹಿಂದೆ ಬೆಳಕಿಗೆ ಬಂದಿತ್ತು. ಇದೀಗ ಬನವಾಸಿ ಪೊಲೀಸರು ಕೊಲೆ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.
ಹಾನಗಲ್ ನ ಕಿರಣ ಪರಶುರಾಮ ಸುರಳೇಶ್ವರ (23),ನಿರಂಜನ ಗೋವಿಂದಪ್ಪ ತಳವಾರ (19) ಹಾಗು ಗುಡ್ಡಪ್ಪ ಯಾನೆ ಗುಡ್ಯ ಕೊಟ್ಟಪ್ಪ ತಿಳುವಳ್ಳಿ (19) ಬಂಧಿತ ಆರೋಪಿಗಳು.
ಹಾನಗಲ್ ತಾಲೂಕಿನ ಹೊಸಗೆಜ್ಜೆಹಳ್ಳಿ ನಿವಾಸಿ ಅಶೋಕ ಗಿರಿಯಪ್ಪ ಉಪ್ಪಾರ (48) ಎಂಬ ವ್ಯಕ್ತಿಯನ್ನು ಕೊಲೆ ಮಾಡಿ ಅರಣ್ಯಪ್ರದೇಶಕ್ಕೆ ತಂದು ಎಸೆದು ಹೋಗಿದ್ದರು.
ಬಂಧಿತರಿಂದ ಕೃತ್ಯಕ್ಕೆ ಬಳಸಿದ ಕ್ರೆಟಾ ಮತ್ತು ಸ್ವಿಪ್ಟ್ ಕಾರು ಜಪ್ತಿಮಾಡಿದ್ದು, ಮೃತನ ಬೈಕ್ ಹಾಗೂ ಮೊಬೈಲ್ ವಶಕ್ಕೆ ಪಡೆದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ..
ಕೇವಲ 48 ಗಂಟೆಯಲ್ಲಿ ಪ್ರಕರಣ ಬೇಧಿಸಿರುವ ಪೊಲೀಸರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ.
ಡಿವೈಎಸ್ ಪಿ ಗಣೇಶ ಕೆ ಲ್ ಮಾರ್ಗದರ್ಶನದಲ್ಲಿ, ಸಿಪಿಐ ರಾಮಚಂದ್ರ ನಾಯಕ್ ನೇತೃತ್ವದಲ್ಲಿ ನಡೆದ ಕಾರ್ಯಚರಣೆಯಲ್ಲಿ ಪಿಎಸ್ ಐ ಚಂದ್ರಕಲಾ ಪತ್ತಾರ್ , ಪಿಎಸ್ಐ ಸುನೀಲ್ ಕುಮಾರ ಬಿ ವೈ ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.
Sirsi,deadbody found case,3 accused arrested
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ