
ಪ್ರಗತಿವಾಹಿನಿ ಸುದ್ದಿ; ಶಿರಸಿ: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಉತ್ತರ ಕನ್ನಡ ಜಿಲ್ಲೆ ಶಿರಸಿ ಪೊಲೀಸರು ಬಂಧಿಸಿದ್ದು, 25,000 ರೂ.ಮೌಲ್ಯದ ಗಾಂಜಾ ಜಪ್ತಿ ಮಾಡಿದ್ದಾರೆ.
ಆರೋಪಿಗಳು ಶಿವಮೊಗ್ಗದ ಸೊರಬದಿಂದ ಉತ್ತರ ಕನ್ನಡ ಜಿಲ್ಲೆ ಶಿರಸಿಗೆ ಅಕ್ರಮವಾಗಿ ಗಾಂಜಾ ಸಾಗಟ ಮಾಡುತ್ತಿದ್ದರು. ಬಂಧಿತರನ್ನು 31 ವರ್ಷದ ವೀರಭದ್ರಪ್ಪ ಕರಿಯಪ್ಪ ಈಡಿಗ ಹಾಗೂ 42 ವರ್ಷದ ಸಾಕಿನ್ ಎಂದು ಗುರುತಿಸಲಾಗಿದೆ.
ಬೈಕಿನಲ್ಲಿ ಒಟ್ಟು 1 ಕೆಜಿ 910 ಗ್ರಾಮ್ ತೂಕದ ಅಂದಾಜು 25,000 ಮೌಲ್ಯದ ಗಾಂಜಾವನ್ನು ಸಾಗಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಗಾಂಜಾ ಹಾಗೂ ಬೈಕನ್ನು ವಶಕ್ಕೆ ಪಡೆದಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಎಡಿಡಿಐ ಎಸ್ ಪಿ ಬದರಿನಾಥ್ ಎಸ್, ರವಿ ಡಿ ನಾಯ್ಕ್, ಡಿಎಸ್ ಪಿ ಶಿರಸಿ ಉಪವಿಭಾಗ ರವರ ಮಾರ್ಗದರ್ಶನದಲ್ಲಿ, ಸಿಪಿಐ ರಾಮಚಂದ್ರ ನಾಯಕ, ಪಿಎಸ್ ಐ ರಾಜಕುಮಾರ ಎಸ್ ಉಕ್ಕಲಿ ರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಎ ಎಸ್ ಐ ವಿ. ಜಿ. ರಾಜೇಶ್, ಗಣಪತಿ ಪಟಗಾರ, ಶಿವು ಉಮ್ಮಚಗಿ, ಪ್ರವೀಣ್ ಯೆನ್, ಕೋಟೇಶ್ ನಾಗರವಳ್ಳಿ, ಅರುಣ ಲಮಾಣಿ, ರಾಜು ಸಾಲಗಾವಿ, ಪಕೀರ ವನ್ನೂರ್, ಮೆಹಬುಬ್ ಕಿಲ್ಲದಾರ ರವರು ಪಾಲ್ಗೊಂಡಿದ್ದರು. ಎಸ್ ಪಿ ಶಿವಪ್ರಕಾಶ್ ದೇವರಾಜು ಪೊಲೀಸರ ಕಾರ್ಯಾಚರಣೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಆತ್ಮಾಹುತಿ ಬಾಂಬ್ ದಾಳಿಗೆ ಐವರು ಸೈನಿಕರು ಬಲಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ