Kannada NewsKarnataka NewsLatest

*ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದಾಗ ದುರಂತ; ಪಾಠಶಾಲಾ ವಿದ್ಯಾರ್ಥಿ ದುರ್ಮರಣ*

ಪ್ರಗತಿವಾಹಿನಿ ಸುದ್ದಿ; ಶಿರಸಿ: ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಪಾಠಶಾಲಾ ವಿದ್ಯಾರ್ಥಿಯೋರ್ವ ನೀರಿನಲ್ಲಿ‌ ಮುಳುಗಿ‌ ಮೃತಪಟ್ಟ ದಾರುಣ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸೋಂದಾ ಶಾಲ್ಮಲಾ ‌ನದಿಯಲ್ಲಿ ಸಂಭವಿಸಿದೆ.

ಯಲ್ಲಾಪುರ ಚಂದಗುಳಿಯ ಗಿರೀಶ ಭಟ್ಟ (21) ಮೃತ ವಿದ್ಯಾರ್ಥಿ. ಗಿರೀಶ್ ಭಟ್ ಸೋಂದಾದಲ್ಲಿ ಉಳಿದು ಅಂತಿಮ ವರ್ಷದ ವಿದ್ವತ್ ಓದುತ್ತಿದ್ದ.

Home add -Advt

ಭೀಮನಪಾದ ಬಳಿ ಶಾಲ್ಮಲಾ ನದಿಯಲ್ಲಿ ಸ್ನಾನಕ್ಕೆಂದು ಇಳಿದಿದ್ದ. ಈ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಶಿರಸಿ ಗ್ರಾಮೀಣ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Related Articles

Back to top button