Latest

*ವಿಚಾರಣಾದೀನ ಕೈದಿ ಜೈಲಿನಲ್ಲಿಯೇ ಆತ್ಮಹತ್ಯೆ*

ಪ್ರಗತಿವಾಹಿನಿ ಸುದ್ದಿ; ಶಿವಮೊಗ್ಗ: ಕೊಲೆ ಕೇಸ್ ನಲ್ಲಿ ವಿಚಾರಣೆ ಎದುರಿಸುತ್ತಿದ್ದ ಕೈದಿಯೊಬ್ಬ ಜಿಲಿನಲ್ಲಿಯೇ ಆತಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ಸೆಂಟ್ರಲ್ ಜೈಲಿನಲ್ಲಿ ನಡೆದಿದೆ.

23 ವರ್ಷದ ಕರುಣಾಕರ ದೇವಾಡಿಗ ಆತ್ಮಹತ್ಯೆ ಮಾಡಿಕೊಂಡಿರುವ ಕೈದಿ. ಜೈಲಿನಲ್ಲಿಯೇ ಕೈದಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದೇ ಜೈಲಿನಲ್ಲಿ ಓರ್ವ ವಿಚಾರಣಾದೀನ ಕೈದಿ ಮೇಲೆ ಇತ್ತೀಚೆಗಷ್ಟೇ ಹಲ್ಲೆ ನಡೆದಿತ್ತು. ಆತ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದ. ಇದರ ಬೆನ್ನಲ್ಲೇ ಈಗ ಇನ್ನೋರ್ವ ಕೈದಿ ನೇಣಿಗೆ ಕೊರಳೊಡ್ಡಿದ್ದಾನೆ.

ನಾಲ್ಕು ತಿಂಗಳ ಹಿಂದೆ ಭದ್ರಾವತಿ ನಗರದ ದೇವಾಲಯದ ಬಳಿ ಅಜ್ಜಿಬಳಿಯಿದ್ದ ಹಣ ದೋಚಿ ಅವರನ್ನು ಕೊಲೆಗೈದು ಎಸ್ಕೇಪ್ ಆಗಿದ್ದ ಕರುಣಾಕರನನ್ನು ಭದ್ರಾವತಿ ಪೊಲೀಸರು ಬಂಧಿಸಿದ್ದರು. ಕೊಲೆ ಕೇಸ್ ಹಿನ್ನೆಲೆಯಲ್ಲಿ ಜೈಲು ಸೇರಿ ವಿಚರಣೆ ಎದುರಿಸುತ್ತಿದ್ದ. ಈಗ ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

Home add -Advt
https://pragati.taskdun.com/jnanayogashramasiddeshwara-shreewill-latterpm-narendra-modi/


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button