Belagavi NewsBelgaum NewsKannada NewsKarnataka News

ಶಿವಶಂಕರ್ ಅರಳಿಮಟ್ಟಿ ನಿಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಆದರ್ಶ ಶಿಕ್ಷಕ, ಸಾಹಿತಿ, ಅಥಣಿ ಮೂಲದ ಶಿವಶಂಕರ್ ಅರಳಿಮಟ್ಟಿ (೯೬) ಅವರು ವಯೋ ಸಹಜ ಅನಾರೋಗ್ಯದಿಂದ ಗುರುವಾರ ಬೆಳಗಾವಿಯ ರಾಣಿ ಚೆನ್ನಮ್ಮ ನಗರದ ಸ್ವಗೃಹದಲ್ಲಿ ನಿಧನ ಹೊಂದಿದರು.

ಫಾಲ್ ಮತ್ತು ಕೆಎಲ್ಇ ಸಂಸ್ಥೆಯ ಜಿ ಎ ಹೈಸ್ಕೂಲ್ ನಲ್ಲಿ ಶಾರೀರಿಕ ಶಿಕ್ಷಣ ಮತ್ತು ವಿಜ್ಞಾನ ಬೋಧಕರಾಗಿದ್ದರು. ಅವರು ಕ್ರೀಡಾಂಗಣ ಮಾಸಪತ್ರಿಕೆ ಸಂಪಾದಕರಾಗಿ, ಉದಯ ಪ್ರಕಾಶನ ಸಂಸ್ಥೆ ಪ್ರಾರಂಭಿಸಿ ಹಲವಾರು ಪುಸ್ತಕಗಳನ್ನು ಪ್ರಕಟಿಸಿದ್ದರು. 1960ರ ದಶಕದಲ್ಲಿ ಸಂಗೊಳ್ಳಿ ರಾಯಣ್ಣ ಕನ್ನಡ ಚಲನಚಿತ್ರ ನಿರ್ಮಾಪಕರಲ್ಲಿ ಒಬ್ಬರಾಗಿದ್ದರು.

95 ವರ್ಷಗಳ ತುಂಬ ಜೀವನ ಕಂಡ ಎಸ್ ಎಂ ಅರಳಿಮಟ್ಟಿ ಹಳೆ ತಲೆಮಾರಿನ ಶಿಕ್ಷಕರಾಗಿ ಅನೇಕ ಮಾನ ಸನ್ಮಾನಗಳಿಗೆ ಪಾತ್ರರಾಗಿದ್ದರು. ಅವರು ಪತ್ನಿ, ಮೂವರು ಗಂಡು ಮಕ್ಕಳು, ಮೊಮ್ಮಕ್ಕಳನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. 

ಅವರ ಇಚ್ಛೆಯಂತೆ ಅವರ ಪ್ರಾರ್ಥಿವ ಶರೀರವನ್ನು ಕೆಎಲ್ಇ ಸಂಸ್ಥೆಯ ಜವರಲಾಲ್ ನೆಹರು ಮೆಡಿಕಲ್ ಕಾಲೇಜಿಗೆ ಅರ್ಪಿಸಲಾಗಿದೆ.  ಈ ಸಂದರ್ಭದಲ್ಲಿ ಬೆಳಗಾವಿ ಕಾರಂಜಿ ಮಠದ ಶ್ರೀ ಗುರುಸಿದ್ಧ ಮಹಾಸ್ವಾಮೀಜಿಯವರು, ಹಿರಿಯ ಸಾಹಿತಿ ಪ್ರಾಚಾರ್ಯ ಬಿಎಸ್ ಗವಿಮಠ, ಡಾಕ್ಟರ್ ಬಸವರಾಜ್ ಜಗಜಂಪಿ, ಪ್ರಾಚಾರ್ಯ ಹೆಗಡೆ, ಪ್ರೊಫೆಸರ್ ಹೆಗಡೆ, ಪ್ರೊಫೆಸರ್ ಮೋಜುಗಾರ ಮಾಂತೇಶ್ ಹಿರೇಮಠ್, ನಿರಲ್ಗಿಮಠ ಉಪಸ್ಥಿತರಿದ್ದರು.

ಅವರ ಅಗಲಿಕೆ ದುಃಖವನ್ನುಂಟು ಮಾಡಿದೆ ಎಂದು ಕೆ ಎಲ್ ಈ ಸಂಸ್ಥೆಯ ಕಾರ್ಯಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು ತೀವ್ರ ದುಃಖ ವ್ಯಕ್ತಪಡಿಸಿ ಭಗವಂತನು ಅವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲೆಂದು ಭಾವಪೂರ್ವ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button