Latest

ರಾಜ್ಯದಲ್ಲಿ 17 ಜನರಿಗೆ ಮತ್ತೆ ಕೊರೋನಾ ಸೋಂಕು ದೃಢ : ಮದರಸಾ ಕರ್ತವ್ಯದಲ್ಲಿದ್ದ ಪೊಲೀಸರಿಗೂ ಸೋಂಕು

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಮತ್ತೆ 17 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಒಟ್ಟೂ 277ಕ್ಕೇರಿದೆ.

ಇದೀಗ ಬಿಡುಗಡೆಯಾಗಿರುವ ಹೆಲ್ತ್ ಬುಲೆಟಿನ್ ಪ್ರಕಾರ ಈವರೆಗೆ ರಾಜ್ಯದಲ್ಲಿ 11 ಜನರು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.

Home add -Advt

ಇಂದು ನಂಜನಗೂಡಿನಲ್ಲಿ 8 ಜನರಿಗೆ ಕೊರೋನಾ ಸೋಂಕಿರುವುದು ದೃಢಪಟ್ಟಿದೆ. ಇವರೆಲ್ಲರೂ ಫಾರ್ಮಾ ಕಂಪನಿಯ ನೌಕರರು. ಇದರಿಂದಾಗಿ ಮೈಸೂರು ಜಿಲ್ಲೆಯಲ್ಲಿ 9 ಜನರು ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಬೆಂಗಳೂರಿನಲ್ಲಿ ಒಂದು, ಬಾಗಲಕೋಟೆಯಲ್ಲಿ ಒಂದು, ಕಲಬುರ್ಗಿಯಲ್ಲಿ ಒಂದು, ಬೆಂಗಳೂರು ಗ್ರಾಮೀಣದಲ್ಲಿ ಒಂದು ಹಾಗೂ ವಿಜಯಪುರದಲ್ಲಿ ಇಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

ಬಾಗಲಕೋಟೆ ಜಿಲ್ಲೆ ಮುಧೋಳದಲ್ಲಿ ಮದರಸಾ ಕರ್ತವ್ಯದಲ್ಲಿದ್ದ ಪೊಲೀಸರೊಬ್ಬರಿಗೆ ಸೋಂಕು ದೃಢಪಟ್ಟಿದೆ.

 

Related Articles

Back to top button