
ಪ್ರಗತಿವಾಹಿನಿ ಸುದ್ದಿ; ಶಿರಸಿ: ತಾಲೂಕಿನ ಸಾಲ್ಕಣಿಯ ಸ್ಮಿತಾ ಹೆಗಡೆ ಅವರಿಗೆ ಬಿಜಾಪುರದ ಪ್ರತಿಷ್ಠಿತ ಬಿ.ಎಲ್.ಡಿ.ಇ. ವಿಶ್ವವಿದ್ಯಾಲಯವು ಮೇ 16 ರಂದು ಡಾಕ್ಟರೇಟ್ ಪದವಿಯನ್ನು ನೀಡಿದೆ.
‘ಜೆನೆಟಿಕ್ ಆ್ಯಂಡ್ ಮಾಲಿಕ್ಯುಲರ್ ಪ್ರೊಫೈಲಿಂಗ್ ಆಫ್ ಜಿಜೆಬಿ2 ಜೀನ್ ಇನ್ ಡೆಫ್ ಮ್ಯೂಟ್ ಪಾಪುಲೇಷನ್ ಆಫ್ ನಾರ್ತ್ ಕರ್ನಾಟಕ’ ಎಂಬ ವಿಷಯದ ಮೇಲೆ ಮಹಾ ಪ್ರಬಂಧವನ್ನು ಸ್ಮಿತಾ ಮಂಡಿಸಿದ್ದರು. ಬಿ.ಎಲ್.ಡಿ.ಇ. ವಿಶ್ವವಿದ್ಯಾಲಯದ ಆ್ಯನಾಟಮಿ ವಿಭಾಗದ ಮುಖ್ಯಸ್ಥ ಡಾ.ಆರ್.ಎಸ್.ಬುಳಗೌಡ ಮತ್ತು ಧಾರವಾಡದ ಡೈರೆಕ್ಟರ್ ಕರ್ನಾಟಕ ಇನ್ಸ್ಟಿಟ್ಯೂಟ್ ಫಾರ್ ಡಿಎನ್ಎ ರಿಸರ್ಚ್ನ ಪ್ರೊ.ಪ್ರಮೋದ್ ಬಿ ಗಾಯಿ ಮಾರ್ಗದರ್ಶಕರಾಗಿದ್ದರು.
ಸ್ಮಿತಾ ಹಲವಾರು ಸಂಶೋಧನಾ ಪ್ರಬಂಧವನ್ನು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟಿಸಿದ್ದಾರೆ. ಸ್ಮಿತಾ ಹೆಗಡೆ ಸಾಲ್ಕಣಿಯ ರಾಮಚಂದ್ರ ಹೆಗಡೆ ಮತ್ತು ನೇತ್ರಾವತಿ ಹೆಗಡೆ ಇವರ ಸುಪುತ್ರಿಯಾಗಿದ್ದಾರೆ.
ರಜತ್ ಹೆಗಡೆಗೆ ಡಾಕ್ಟರೇಟ್:
ಶಿರಸಿ: ಸಿದ್ದಾಪುರ ತಾಲೂಕಿನ ಇಟಗಿ ಗ್ರಾಮದವರಾದ ರಜತ್ ಹೆಗಡೆ ಅವರಿಗೆ ಬಿಜಾಪುರದ ಪ್ರತಿಷ್ಠಿತ ಬಿ.ಎಲ್.ಡಿ.ಇ. ವಿಶ್ವವಿದ್ಯಾಲಯವು ಮೇ 15 ರಂದು ಡಾಕ್ಟರೇಟ್ ಪದವಿ ನೀಡಿದೆ.
‘ಜೆನೆಟಿಕ್ ಆ್ಯಂಡ್ ಮಾಲಿಕ್ಯುಲರ್ ಪ್ರೊಫೈಲಿಂಗ್ ಆಫ್ ನ್ಯುರೋಲಿಜಿನ್3, ನ್ಯುರೋಲಿಜಿನ್4X, ನ್ಯುರೋಲಿಜಿನ್4Y ಜೀನ್ಸ್ ಇನ್ ಆಟಿಸಂ ಸ್ಪೆಕ್ಟ್ರಮ್ ಡಿಸೋರ್ಡರ್ ಅಮೋಂಗ್ ದಿ ಪಾಪುಲೇಷನ್ ಆಫ್ ನಾರ್ತ್ ಕರ್ನಾಟಕ’ ಎಂಬ ವಿಷಯದ ಮೇಲೆ ಅವರು ಮಹಾಪ್ರಬಂದವನ್ನು ಮಂಡಿಸಿದ್ದರು.
ಬಿ.ಎಲ್.ಡಿ.ಇ. ವಿಶ್ವವಿದ್ಯಾಲಯದ ಲ್ಯಾಬೋರೇಟರಿ ಆಫ್ ವೆಸ್ಕ್ಯುಲರ್ ಫಿಸಿಯೋಲಾಜಿ ಅಂಡ್ ಮೆಡಿಸಿನ್ ವಿಭಾಗದ ಮುಖ್ಯ ಪ್ರಾಧ್ಯಾಪಕ ಪ್ರೊ.ಕುಶಾಲ್ ಕೆ.ದಾಸ್, ಧಾರವಾಡದ ಡೈರೆಕ್ಟರ್ ಕರ್ನಾಟಕ ಇನ್ಸ್ಟಿಟ್ಯೂಟ್ ಫಾರ್ ಡಿಎನ್ಎ ರಿಸರ್ಚ್ನ ಪ್ರೊ.ಪ್ರಮೋದ್ ಬಿ.ಗಾಯಿ ಮಾರ್ಗದರ್ಶಕರಾಗಿದ್ದರು.
ರಜತ್ ಅವರು ಹಲವಾರು ಸಂಶೋಧನಾ ಪ್ರಬಂಧವನ್ನು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟಿಸಿದ್ದಾರೆ. ಇವರಿಗೆ ಪ್ರತಿಷ್ಠಿತ ದಿ ಫಿಜಿಯೋಲೋಜಿ ಸೊಸೈಟಿ ಆಫ್ ಇಂಡಿಯಾ ಇವರು ಪ್ರೊ.ಸಚ್ಚಿದಾನಂದ ಬ್ಯಾನರ್ಜಿ ಸ್ಮರಣಾರ್ಥ ‘ಯುವ ವಿಜ್ಞಾನಿ’ ಎಂಬ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇವರು ಸಿದ್ದಾಪುರದ ಇಟಗಿಯ ವೀರಭದ್ರ ಹೆಗಡೆ ಮತ್ತು ಕಾಮಾಕ್ಷಿ ಹೆಗಡೆಯವರ ಸುಪುತ್ರರಾಗಿದ್ದಾರೆ.