ಪ್ರಗತಿವಾಹಿನಿ ಸುದ್ದಿ: ಎಕ್ಸಿಬಿಷನ್ ವೊಂದರಲ್ಲಿ ಸ್ಮೋಕ್ ಬಿಸ್ಕೆಟ್ ತಿಂದ ಬಾಲಕ ತೀವ್ರ ಅಸ್ವಸ್ಥಗೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯ ಅರುಣಾ ಸರ್ಕಲ್ ಬಳಿ ನಡೆದಿದೆ.
ಮಕ್ಕಳ ಮನರಂಜನೆಗಾಗಿ ಬೇಸಿಗೆ ರಜೆ ಹಿನ್ನೆಲೆಯಲ್ಲಿ ದಾವಣಗೆರೆ ನಗರದ ಅರುಣಾ ಸರ್ಕಲ್ ನಲ್ಲಿ ಎಕ್ಸಿಬಿಷನ್ ಏರ್ಪಡಿಸಲಾಗಿತ್ತು. ಎಕ್ಸಿಬಿಷನ್ ನಲ್ಲಿ ಸ್ಮೋಕ್ ಬಿಸ್ಕೆಟ್ ದೊಡ್ಡವರಿಂದ ಹಿಡಿದು ಚಿಕ್ಕಮಕ್ಕಳವರೆಗೂ ಗಮನ ಸೆಳೆದಿತ್ತು.
ಒಂದು ಕಪ್ ನಲ್ಲಿ ಚಿಕ್ಕಚಿಕ್ಕ ಸ್ಮೋಕ್ ಬಿಸ್ಕೆಟ್ ಇಟ್ಟು ಕೊಡಲಾಗಿತ್ತು. ಇದನ್ನು ಖರೀದಿಸಿದ ಬಾಲಕನೊಬ್ಬ ಒಮ್ಮೆಲೆ ಬಾಯಿಗೆ ಹಾಕಿಕೊಳ್ಳುತ್ತಿದ್ದಂತೆ ಬಾಲಕನಿಗೆ ತೀವ್ರ ಉಸಿರಾಟದ ಸಮಸ್ಯೆಯಾಗಿ ಅಸ್ವಸ್ಥಗೊಂಡಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸದ್ಯ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಪೋಷಕರು ದಾವಣಗೆರೆ ಬಡಾವಣೆ ಠಾಣೆಗೆ ದೂರು ನೀಡಿದ್ದು, ಎಕ್ಸಿಬಿಷನ್ ನಲ್ಲಿ ಸ್ಮೋಕ್ ಬಿಸ್ಕೆಟ್ ಮಾರಾಟ ಬಂದ್ ಮಾಡಲಾಗಿದೆ.
ಸ್ಮೋಕ್ ಬಿಸ್ಕೆಟ್ ನಲ್ಲಿ ಲಿಕ್ವಿಡ್ ನೈಟ್ರೋಜನ್ ಇರುವುದರಿಂದ ಸೇವಿಸುತ್ತಿದ್ದಂತೆ ಹಲವರಿಗೆ ಉಸಿರಾಟದ ಸಮಸ್ಯೆಯಾಗುವ ಸಾಧ್ಯತೆ ಹೆಚ್ಚು. ಇದೇ ಕಾರಣಕಾಗಿ ಮಕ್ಕಳಿಗೆ ಇದನ್ನು ನೀಡದಿರುವುದು ಸೂಕ್ತ ಎಂದು ಹೇಳಲಾಗುತ್ತದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ