ಪ್ರಗತಿವಾಹಿನಿ ಸುದ್ದಿ: ಹಾವು ಕಚ್ಚಿ ಮೂರು ವರ್ಷದ ಬಾಲಕ ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಗುಮ್ಮವಾರಂಡ್ಲಪಲ್ಲಿ ಗ್ರಾಮದಲ್ಲಿ ನಡೆದಿದೆ.
ಮೂರು ವರ್ಷದ ದೀಕ್ಶ್ಗಿತ್ ಮೃತ ಬಾಲಕ. ಮಾಲತಿ ಹಾಗೂ ಸುರೇಶ್ ದಂಪತಿಯ ಪುತ್ರ. ಮನೆಯ ಮುಂದೆ ಕಾಂಪೌಂಡ್ ನಲ್ಲಿ ಬಾಲಕ ರಾತ್ರಿ ಮಲಗಿದ್ದ. ಈ ವೇಳೆ ನಾಗರಹಾವು ಕಚ್ಚಿದೆ.
ತಕ್ಷಣ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಸೂಕ್ತ ಸಮಯದಲ್ಲಿ ಚಿಕ್ಕಿತ್ಸೆ ಸಿಗದೇ ಬಾಲಕ ಸಾವನ್ನಪ್ಪಿದ್ದಾನೆ. ಆಸ್ಪತ್ರೆಯ ವಿರುದ್ಧ ಬಾಲಕನ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ