ಪ್ರಗತಿವಾಹಿನಿ ಸುದ್ದಿ, ಮುಂಬೈ: ಸೋಷಿಯಲ್ ಮೀಡಿಯಾ: ನೀವು ಮತ್ತು ನಿಮ್ಮ ಜವಾಬ್ದಾರಿ ಕುರಿತು ವಿಶೇಷ ಸಂದರ್ಶನ ಮಹಾರಾಷ್ಟ್ರ ಆಕಾಶವಾಣಿಯಿಂದ ಪ್ರಸಾರವಾಗಲಿದೆ.
ಲಾಕ್‌ಡೌನ್ ಕಾಲದಲ್ಲಿ ಹೆಚ್ಚಿದ ಸೈಬರ್ ಅಪರಾಧ ಮತ್ತು ಅದರ ವಿರುದ್ದ ತೆಗೆದುಕೊಳ್ಳಲಾದ ಕ್ರಮಗಳು, ಸಾಮಾಜಿಕ ಮಾಧ್ಯಮವನ್ನು ಬಳಸುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು, ತಪ್ಪು ಮತ್ತು ನಕಲಿ ಪೋಸ್ಟ್ ಗಳನ್ನು ಶೇರ್ ಮಾಡಿದವರ ವಿರುದ್ದ ತೆಗೆದುಕೊಳ್ಳಲಾದ ಕ್ರಮ, ವಿವಿಧ ಅಪ್ಲಿಕೇಶನ್ ಅಥವಾ ಇಮೇಲ್‌ಗಳನ್ನು ಬಳಸುವಾಗ ಹೇಗೆ ಪಾಸ್‌ವರ್ಡ್‌ಗಳನ್ನು ಸುರಕ್ಷಿತವಾಗಿರಿಸಿಕೊಳ್ಳುವುದು, ಮೊಬೈಲ್‌ನಲ್ಲಿ ಬರುವ ಸ್ಪ್ಯಾಮ್ ಕರೆಗಳು, ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಕುರಿತು ರಾಜ್ಯದ ಮಾಹಿತಿ ಮತ್ತು ಜನಸಂಪರ್ಕ ನಿರ್ದೇಶನಾಲಯದಿಂದ ನಿರ್ಮಿಸಲಾದ ‘ದಿಲ್ಕುಲಾಸ್’ ಕಾರ್ಯಕ್ರಮದಲ್ಲಿ ರಾಜ್ಯ ಸೈಬರ್ ವಿಭಾಗದ ಪೊಲೀಸ್ ಅಧೀಕ್ಷಕ ಡಾ.ಬಾಳ್ಸಿಂಗ್ ರಾಜಪೂತ್ ಅವರ ಸಂದರ್ಶನ ಪ್ರಸಾರವಾಗಲಿದೆ.
ಸಂದರ್ಶನ ಮಹಾರಾಷ್ಟ್ರ ರಾಜ್ಯದ ಆಕಾಶವಾಣಿಯ ಎಲ್ಲಾ ಕೇಂದ್ರದಿಂದ ಆಗಸ್ಟ್ 14 ಶುಕ್ರವಾರ ಮತ್ತು ಆಗಸ್ಟ್ 17 ಸೋಮವಾರ ಬೆಳಿಗ್ಗೆ 7.25 ರಿಂದ 7.40 ರವರೆಗೆ ಪ್ರಸಾರವಾಗಲಿದೆ. ನಿರೂಪಕ ನರೇಂದ್ರ ಬೇಡೆಕರ್ ಈ ಸಂದರ್ಶನವನ್ನು ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ