Latest

ಫೇಲ್ ಆಗಿದ್ದಕ್ಕೆ ಬೈದ ಪೋಷಕರು; ಮನೆ ಬಿಟ್ಟು ನಾಪತ್ತೆಯಾದ ಯುವಕ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ತಂದೆ-ತಾಯಿ ಬೈದಿದ್ದಕ್ಕೆ ಕೋಪಗೊಂದ ಮಗನೊಬ್ಬ ಮನೆ ಬಿಟ್ಟು ನಾಪತ್ತೆಯಾಗಿರುವ ಘಟನೆ ಬೆಂಗಳೂರಿನ ಮರಿಯಪ್ಪನಪಾಳ್ಯದಲ್ಲಿ ನಡೆದಿದೆ.

ಪಿಯುಸಿ ಪರೀಕ್ಷೆಯಲ್ಲಿ ಮಗ ಫೇಲಾಗಿದ್ದಕ್ಕೆ ಅಪ್ಪ-ಅಮ್ಮ ಮಗನಿಗೆ ಬೈದಿದ್ದಾರೆ. ಇದಕ್ಕೆ ಕೋಪಗೊಂಡ ಮಗ ವಿಶಾಲ್ ತನ್ನನ್ನು ಹುಡುಕಬೇಡಿ ಎಂದು ಪತ್ರ ಬರೆದಿಟ್ಟು 5000 ರೂಪಾಯಿ ಹಣದೊಂದಿಗೆ ಮನೆ ಬಿಟ್ಟು ಹೋಗಿದ್ದಾನೆ.

Home add -Advt

ಬಿಲ್ಡರ್ ಮಂಜುನಾಥ್ ಎಂಬುವವರ ಪುತ್ರ ವಿಶಾಲ್ ಮನೆ ಬಿಟ್ಟು ಹೋಗಿರುವ ಯುವಕ. ವಿಶಾಲ್ ಖಾಸಗಿ ಕಾಲೇಜಿನಲ್ಲಿ ಪಿಯು ಓದುತ್ತಿದ್ದ. ಪರೀಕ್ಷೆಯಲ್ಲಿ ಎರಡು ವಿಷಯಗಳಲ್ಲಿ ಫೇಲ್ ಆಗಿದ್ದ. ಇದೇ ಕಾರಣಕ್ಕೆ ಚನ್ನಾಗಿ ಓದಲು ಏನಾಗುತ್ತೆ ಎಂದು ಮನೆಯಲ್ಲಿ ಪೋಷಕರು ಬೈದಿದ್ದಾರೆ.

ತನ್ನ ಹೋಂಡಾ ಆಕ್ಟಿವಾ ಬೈಕ್ ನೊಂದಿಗೆ ಮನೆ ಬಿಟ್ಟು ಹೋದ ಯುವಕ ವಾಪಸ್ ಆಗಿಲ್ಲ. ಆತ ಮನೆಯಿಂದ ಹೊರ ಹೋಗುವ ದೃಶ್ಯ ಅಪಾರ್ಟ್ ಮೆಂಟ್ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಫೋನ್ ಸಂಪರ್ಕಕ್ಕೂ ಮಗ ಸಿಗುತ್ತಿಲ್ಲ ಎಂದು ಪೋಷಕರು ಆತಂಕಕ್ಕೀಡಾಗಿದ್ದಾರೆ. ಮಗನಿಗಾಗಿ ಹುಡುಕಿ ಸುಸ್ತಾದ ಪೋಷಕರು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರ ಬರ್ಬರ ಹತ್ಯೆ

Related Articles

Back to top button