Belagavi NewsBelgaum NewsKannada NewsKarnataka News

*500 ರೂ. ಗುಜರಿ ಹಣಕ್ಕಾಗಿ ತಾಯಿ ಎದುರೆ ಮಗನ ಕೊಲೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗುಜರಿಯ 500 ರೂ ಹಣಕ್ಕಾಗಿ ಸ್ನೇಹಿತರಿಂದಲೆ ಸ್ನೇಹಿತ ಭೀಕರ ಕೊಲೆ ಆಗಿರುವ ಘಟನೆ ಬೆಳಗಾವಿ ತಾಲೂಕಿನ ಯಳ್ಳೂರು ಗ್ರಾಮದಲ್ಲಿ ನಡೆದಿದೆ.‌

ಯಳ್ಳೂರು ಗ್ರಾಮದ ನಿವಾಸಿ ಹುಸೇನ್ ತಾಶೇವಾಲೆ(45) ಕೊಲೆಯಾದ ದುರ್ದೈವಿ. ಆರೋಪಿಗಳಾದ ಮಿಥುನ್ ಹಾಗೂ ಮನೋಜ್ ಇಂಗಳೇ ಎಂಬುವವರು ಕೊಲೆ ಮಾಡಿದ್ದು, ಈ ಇಬ್ಬರು ಆರೋಪಿಗನ್ನು ಬಂಧಿಸಿ ಬೆಳಗಾವಿಯ ಗ್ರಾಮೀಣ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ.

ಗುಜರಿ ಸಾಮಗ್ರಿ ವಿಚಾರಕ್ಕೆ ಸ್ನೇಹಿತರ ಮಧ್ಯೆ ಜಗಳವಾಗಿ ಮನಸ್ತಾಪಗಳಾಗಿತ್ತು ಎನ್ನಲಾಗಿದೆ. ಮೃತ ಹುಸೇನ್ ಕೊಲೆ ಆರೋಪಿಗಳಾದ ಮಿಥುನ್ ಮತ್ತು ಮನೋಜ್ ಗೆ ಐನೂರು ರೂ ಕೊಡಬೇಕಿತ್ತು. ಹಣ ಕೇಳಲು ಹುಸೇನ್ ಮನೆಗೆ ಇಬ್ಬರೂ ಹೋಗಿದ್ದರು ಎನ್ನಲಾಗಿದೆ. ಈ ವೇಳೆ ಮೂವರ ಮಧ್ಯೆ ಗಲಾಟೆಯಾಗಿದೆ. ಈ ವೇಳೆ ಹುಸೇನ್ ಹೊಟ್ಟೆಯ ಭಾಗಕ್ಕೆ ಕೈಯಿಂದ ಇಬ್ಬರೂ ಆರೋಪಿಗಳು ಗುದ್ದಿದ್ದಾರೆ. ಹೊಟ್ಟೆಯ ಭಾಗಕ್ಕೆ ಬಲವಾಗಿ ಪೆಟ್ಟು ಬಿದ್ದದ್ದರಿಂದ ಹುಸೇನ್ ಗಂಭೀರವಾಗಿ ಗಾಯಗೊಂಡಿದ್ದ. ಗಾಯಗೊಂಡ ಹುಸೇನ್ ನನ್ನು ಬೀಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು‌. ಆದರೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಹುಸೇನ್ ಸಾವನ್ನಪ್ಪಿದ್ದಾನೆ.

Home add -Advt

ಇನ್ನು ಪ್ರಕರಣ ದಾಖಲಿಸಿಕೊಂಡ ಬೆಳಗಾವಿ ಗ್ರಾಮೀಣ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Related Articles

Back to top button