Cancer Hospital 2
Beereshwara 36
LaxmiTai 5

*ಅಪ್ಪ-ಅಮ್ಮನನ್ನೇ ಬರ್ಬರವಾಗಿ ಹತ್ಯೆಗೈದ ಮಗ*

Anvekar 3

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಹೆತ್ತ ತಂದೆ-ತಾಯಿಯನ್ನೇ ಮಗನೊಬ್ಬ ಬರ್ಬರವಾಗಿ ಹತ್ಯೆಗೈದಿರುವ ಘೋರ ಘಟನೆ ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ನಡೆದಿದೆ.

ಭಾಸ್ಕರ್ ಹಾಗೂ ಶಾಂತಾ ದಂಪತಿ ಕೊಲೆಯಾದವರು. ಶರತ್ ತಂದೆ-ತಾಯಿಯನ್ನೇ ಕೊಲೆಗೈದ ಮಗ. ಮಾರಕಾಸ್ತ್ರಗಳಿಂದ ಹೊಡೆದು ತಂದೆ-ತಾಯಿ ಇಬ್ಬರನ್ನು ಶರತ್ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

Emergency Service

ಶಾಂತಾ ಇತ್ತೀಚೆಗೆ ಕೇಂದ್ರ ಸರ್ಕಾರದ ನೌಕರಿಯಿಂದ ನಿವೃತ್ತಿಯಾಗಿದ್ದರು. ಪತಿ ಭಾಸ್ಕರ್ ಖಾಸಗಿ ಕ್ಯಾಂಟೀನ್ ನಲ್ಲಿ ಕ್ಯಾಶಿಯರ್ ಆಗಿದ್ದರು. ಪತಿ-ಪತ್ನಿ ಇಬ್ಬರೂ ಕಳೆದ 20 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದರು. ಓರ್ವ ಮಗ ಕೆಲಸಕ್ಕೆ ಹೋಗುತ್ತಿದ್ದ. ಇನ್ನೋರ್ವ ಮಗ ಆರೋಪಿ ಶರತ್ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇದ್ದ.

ಕುಡಿದು ಬಂದು ನಿನ್ನೆ ತಂದೆ-ತಾಯಿ ಜೊತೆ ಶರತ್ ಗಲಾಟೆ ಮಾಡುತ್ತಿದ್ದ. ಇದೇ ವೇಳೆ ತಂದೆ-ತಾಯಿ ಇಬ್ಬರಿಗೂ ರಾಡ್ ನಿಂದ ಹೊಡೆದು ಕೊಲೆಗೈದಿರುವ ಶರತ್ ಬಳಿಕ ಮನೆ ಲಾಕ್ ಮಾಡಿ ಪರಾರಿಯಾಗಿದ್ದಾನೆ. ಹಿರಿಯ ಮಗ ತಂದೆ -ತಾಯಿಗೆ ಇಂದು ಕರೆ ಮಾಡಿದ್ದಾನೆ. ಆದರೆ ಫೋನ್ ರಿಸೀವ್ ಮಾಡಿಲ್ಲ. ಪಕ್ಕದ ಮನೆಯವರಿಗೆ ಕರೆ ಮಾಡಿ ವಿಚಾರಿಸಿದ್ದಾನೆ ಈ ವೇಳೆ ಪಕ್ಕದ ಮನೆಯರು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಸ್ಥಳಕ್ಕೆ ಕೋಡಿಗೆಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Bottom Add3
Bottom Ad 2