Kannada NewsKarnataka NewsLatestPolitics

*ಪ್ರೊಟೊಕಾಲ್ ಪ್ರಕಾರವೇ ಅಧಿಕಾರಿಗಳನ್ನು ನಡೆಸಿಕೊಂಡಿದ್ದೇವೆ; ಡಿಸಿಎಂ ಸ್ಪಷ್ಟನೆ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಪಕ್ಷ ನಾಯಕರ ಮಹಾ ಮೈತ್ರಿಕೂಟ ಸಭೆಗೆ ಐಎ ಎಸ್ ಅಧಿಕಾರಿಗಳನ್ನು ಬಳಸಿಕೊಳ್ಳುವ ಮೂಲಕ ಕಾಂಗ್ರೆಸ್ ಸರ್ಕಾರ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂಬ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆರೋಪಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಸರ್ಕಾರದಿಂದ ಯಾವುದೇ ಅಧಿಕಾರಿಗಳ ದುರುಪಯೋಗವಾಗಿಲ್ಲ, ಶಿಷ್ಟಾಚಾರದ ಪ್ರಕಾರವೇ ಅಧಿಕಾರಿಗಳನ್ನು ನಡೆಸಿಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.

Home add -Advt

ಕುಮಾರಣ್ಣ ಮಾತಾಡ್ತಾರೆ, ಅವರಿಗೂ ಸುದ್ದಿ ಬೇಕಲ್ವಾ? ಹಾಗಾಗಿ ಆರೋಪ ಮಾಡಿದ್ದಾರೆ ಎಂದು ಟಾಂಗ್ ನೀಡಿದರು.

ಖಾಸಗಿ ಸಭೆ, ರಾಜಕೀಯ ಪಕ್ಷಗಳ ಸಭೆ, ಖಾಸಗಿ ಕಾರ್ಯಕ್ರಮಕ್ಕಾಗಿ ಸರ್ಕಾರ ಐಎ ಎಸ್ ಅಧಿಕಾರಿಗಳನ್ನು ಬಳಸಿಕೊಳ್ಳುತ್ತಿದೆ. ರಾಜ್ಯದ ಅಧಿಕರಿಗಳನ್ನು ಬೇರೆ ರಾಜ್ಯದ ಮುಖ್ಯಮಂತ್ರಿಗಳ ಹೊರತಾದ ಬೇರೆ ಬೇರೆ ನಾಯಕರ ಬಾಗಿಲು ಕಾಯುವ ಕೆಲಸಕ್ಕೆ ನೇಮಿಸಿದ್ದಾರೆ. ಕಳೆದ 40 ವರ್ಷಗಳ ಇಇಹಾಸದಲ್ಲೇ ಇಂತಹ ಘಟನೆ ನಡೆದಿಲ್ಲ. ಅಧಿಕಾರ ದುರುಪಯೋಗಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ? ಎಂದು ಮಾಜಿ ಸಿಎಂ ಕುಮಾರಸ್ವಾಮಿ ಕಿಡಿಕಾರಿದ್ದರು.


Related Articles

Back to top button