
ಪ್ರಗತಿವಾಹಿನಿ ಸುದ್ದಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲು ಸೇರಿದೆ. ನಟ ದರ್ಶನ್ ಅಭಿಮಾನಿಗಳ ಹೆಸರಲ್ಲಿ ಕೆಲವರು ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ರೇಣುಕಾಸ್ವಾಮಿಯದ್ದು ಎನ್ನಲಾದ ಖಾತೆಯಿಂದ ನನಗೂ ಕೆಟ್ಟ ಸಂದೇಶಗಳು ಬಂದಿವೆ ಎಂದು ಯೂಟ್ಯೂಬರ್ ಸೋನು ಗೌಡ ಹೇಳಿದ್ದರು. ಇದೀಗ ಹೊಸ ವಿಡಿಯೋವೊಂದನ್ನು ಹಂಚಿಕೊಂಡಿರುವ ಸೋನು ಗೌಡ ನನಗೆ ನಟ ದರ್ಶನ್ ಅಭಿಮಾನಿಗಳ ಹೆಸರಲ್ಲಿ ಕೆಟ್ಟ ಸಂದೇಶ, ಅವಾಚ್ಯ ಶಬ್ದಗಳ ನಿಂದನೆ ಬರುತ್ತಿದೆ ಎಂದು ಆರೋಪಿಸಿದ್ದಾರೆ.
ಕೆಟ್ಟ ಕಮೆಂಟ್ ಗಳನ್ನು ಯೂಟ್ಯೂಬ್, ಇನ್ ಸ್ಟಾಗ್ರಾಂ, ಫೇಸ್ ಬುಕ್ ಗಳಲ್ಲಿ ಹಾಕುತ್ತಿದ್ದಾರೆ. ಡಿ ಬಾಸ್ ದರ್ಶನ್ ಪರವಾಗಿ ಮಾತನಾಡಿಲ್ಲ ಎಂದು ಒತ್ತಾಯಿಸುತ್ತಿದ್ದಾರೆ ಎಂದಿದ್ದಾರೆ.
ನಾನಿನ್ನೂ ಚಿಕ್ಕವಳು. ಅವರ ಬಗ್ಗೆ ಮಾತನಾಡುವಷ್ಟು ದೊಡ್ಡವಳಲ್ಲ, ತಪ್ಪು ಯಾರೇ ಮಾಡಿದರೂ ಶಿಕ್ಷೆ ಆಗಲಿದೆ. ಒಳ್ಳೆಯವರಾಗಿರಲಿ, ಕೆಟ್ಟವರಾಗಿರಲಿ ಕಾನೂನಿನಲ್ಲಿ ತೀರ್ಪು ಅಂತ ಬರುತ್ತೆ ಅಲ್ಲಿಯವರೆಗೂ ಕಾಯೋಣ ಎಂದು ಸೋನು ಗೌಡ ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ