ಪ್ರಗತಿವಾಹಿನಿ ಸುದ್ದಿ, ಮುಂಬೈ: ಭಾರತೀಯರೆಂದರೆ ಹಾವಾಡಿಗರು ಎಂಬಂತೆ ಸ್ಪೇನ್ ನ ಪತ್ರಿಕೆಯೊಂದು ಬಿಂಬಿಸಿದೆ.
ಸ್ಪ್ಯಾನಿಷ್ ಪತ್ರಿಕೆಯ ಈ ಕ್ರಮ ಭಾರೀ ಟೀಕೆಗೆ ಗುರಿಯಾಗಿದೆ. ಪತ್ರಿಕೆಯಲ್ಲಿ “ಭಾರತೀಯ ಆರ್ಥಿಕತೆಯ ಸಮಯ” ಎಂಬ ಶೀರ್ಷಿಕೆಯೊಂದಿಗೆ ಪ್ರಕಟವಾದ ವ್ಯಂಗ್ಯಚಿತ್ರದಲ್ಲಿ ಭಾರತದ ಆರ್ಥಿಕತೆಯನ್ನು ಬಿಂಬಿಸುವ ರೀತಿ ಟೀಕಾಸ್ಪದವಾಗಿದೆ. ಹಾವಾಡಿಗನೊಬ್ಬ ಪುಂಗಿ ಊದಿ ಹಾವಾಡಿಸುವ ಮೂಲಕ ಗ್ರಾಫ್ ಮೇಲಕ್ಕೇರುತ್ತಿರುವುದನ್ನು ಚಿತ್ರಿಸಲಾಗಿದೆ.
ಭಾರತವನ್ನು ಪ್ರತಿನಿಧಿಸಲು ಹಾವು ಮೋಡಿ ಮಾಡುವವರ ವ್ಯಂಗ್ಯಚಿತ್ರವನ್ನು ಬಳಸಿರುವುದನ್ನು ಝೆರೋಧಾ ಸಿಇಒ ನಿತಿನ್ ಕಾಮತ್ ಕಟುವಾಗಿ ಟೀಕಿಸಿದ್ದಾರೆ. ಅವರು ಟ್ವಿಟರ್‌ನಲ್ಲಿ ಲಾ ವ್ಯಾನ್‌ಗಾರ್ಡಿಯಾದ ಮುಖಪುಟದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಇದು ‘ಅವಮಾನಕರ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಹಲವರು ಈ ವ್ಯಂಗ್ಯಚಿತ್ರದ ಬಗ್ಗೆ ಖಾರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು “ಸ್ಪೇನ್ ಜನರಿಗಿನ್ನೂ ಜಗತ್ತಿನ ಜ್ಞಾನವಿದ್ದಂತಿಲ್ಲ. ಭಾರತ ಮುಂದುವರಿದಿರುವುದನ್ನು ಇಡೀ ಜಗತ್ತೇ ವೀಕ್ಷಿಸುತ್ತಿದೆ.” ಎಂದು ಹೇಳಿದ್ದಾರೆ.
ಮತಾಂತರ ನಿಷೇಧ ಕಾಯ್ದೆ ಜಾರಿ ಬಳಿಕ ಮೊದಲ ಪ್ರಕರಣ; ಆರೋಪಿ ಬಂಧನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ