Latest

ಸುಪ್ರಿಂಗೆ ಸ್ಪೀಕರ್ ಮರು ಅರ್ಜಿ: ಇಂದೇ ವಿಚಾರಣೆ ಪೂರ್ಣ ಡೌಟ್

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು:  

ಸಂಜೆ 6 ಗಂಟೆಯೊಳಗೆ ಅತೃಪ್ತ ಶಾಸಕರು ಸ್ಪೀಕರ್ ಮುಂದೆ ಹಾಜರಾಗಬೇಕು. ಸಾಧ್ಯವಾದಷ್ಟು ಇಂದೇ ರಾಜಿನಾಮೆ ವಿಚಾರ ಇತ್ಯರ್ಥಪಡಿಸಬೇಕು ಎನ್ನುವ ಸುಪ್ರಿಂ ಕೋರ್ಟ್ ಸೂಚನೆ ಕುರಿತು ಸ್ಪೀಕರ್ ರಮೇಶ ಕುಮಾರ ಮರು ಅರ್ಜಿ ಸಲ್ಲಿಸಿದ್ದಾರೆ.

ಇಂದು ಸಂಜೆಯೊಳಗೆ ಇತ್ಯರ್ಥಪಡಿಸಲು ಸಾಧ್ಯವಿಲ್ಲ. ನಾನು ಸಂವಿದಾನದ ನಿಯಮಾವಳಿ ಪ್ರಕಾರ ನಡೆದುಕೊಳ್ಳುತ್ತೇನೆ. ಸುಪ್ರಿಂ ಕೋರ್ಟ್ ನಿರ್ದೇಶನ ನೀಡಲು ಸಾಧ್ಯವಿಲ್ಲ. ಈ ಬಗ್ಗೆ ಪರಿಶೀಲಿಸಬೇಕು ಎಂದು ರಮೇಶ ಕುಮಾರ ಕೋರಿದ್ದಾರೆ. ತಕ್ಷಣ ತಮ್ಮ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಎಂದು ಅವರು ವಿನಂತಿಸಿದ್ದಾರೆ.

ಆದರೆ ಸುಪ್ರಿಂ ಕೋರ್ಟ್, ಶಾಸಕರಿಗೆ ಹಾಜರಾಗಲು ನಾವು ಹೇಳಿದ್ದೇವೆ. ಆದರೆ ನೀವು ಇಂದೇ ಇತ್ಯರ್ಥಪಡಿಸಿ ಎಂದು ಹೇಳಿಲ್ಲ. ಅದು ನಿಮಗೆ ಬಿಟ್ಟಿದ್ದು ಎಂದು ಹೇಳಿದೆ.

ಈ ಮಧ್ಯೆ, ಮುಂಬೈಯಲ್ಲಿದ್ದ ಅತೃಪ್ತ ಸಾಸಕರು ಈಗಾಗಲೆ ಅಲ್ಲಿಂದ ಬೆಂಗಳೂರಿನತ್ತ ಹೊರಟಿದ್ದಾರೆ. ಸ್ಪೀಕರ್ ಮುಂದೆ ಹಾಜರಾಗಿ ಮರು ರಾಜಿನಾಮೆ ಸಲ್ಲಿಸಲಿದ್ದಾರೆ. ಮುಂದಿನ ವಿಚಾರಣೆ ಸ್ಪೀಕರ್ ವಿವೇಚನೆ ಮೇಲೆ ಅವಲಂಭಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button