Kannada NewsKarnataka NewsLatest

ಶಿವಚರಿತ್ರೆ ಇನ್ನು 3 ತಿಂಗಳಲ್ಲಿ ರೆಡಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಇಲ್ಲಿಯ ಶಿವಜಿ ಗಾರ್ಡನ್ ನಲ್ಲಿ ಶಾಸಕ ಅಭಯ ಪಾಟೀಲ ಅವರ ಯೋಜನೆಯಂತೆ ನಿರ್ಮಾಣವಾಗುತ್ತಿರುವ ಶಿವಚರಿತ್ರೆ ದೃಷ್ಯಾವಳಿ ಬರುವ ಅಕ್ಟೋಬರ್ ಅಥವಾ ನವೆಂಬರ್ ಹೊತ್ತಿಗೆ ಉದ್ಘಾಟನೆಯಾಗಲಿದೆ.

Home add -Advt

7  ಕೋಟಿ ರೂ. ವೆಚ್ಚದ ಯೋಜನೆ ಇದಾಗಿದ್ದು, ಈವರೆಗೆ 6 ಕೋಟಿ ರೂ. ವೆಚ್ಚವಾಗಿದೆ. ನಗರಾಭಿವೃದಧಿ ಪ್ರಾಧಿಕಾರ ಮತ್ತು ಶಾಸಕರ ನಿಧಿ ಬಳಸಲಾಗಿದೆ. ಕಡಿಮೆ ಬಿದ್ದಿದ್ದ ಒಂದು ಕೋಟಿ ರೂ. ಈಗ ಮಂಜೂರಾಗಿದೆ.

ಎಂಇಎಸ್ ನ ಕೆಲವು ನಾಯಕರ ಕುತಂತ್ರದಿಂದ ಹಲವು ಅಡ್ಡಿಗಳುಂಟಾದರೂ ಅಭಯ ಪಾಟೀಲ ನಿರಂತರ ಪ್ರಯತ್ನದಿಂದ ಯೋಜನೆ ಜಾರಿಗೊಳಿಸುತ್ತಿದ್ದಾರೆ. ಕಳೆದ ಅವಧಿಯಲ್ಲಿ ಅವರು ಶಾಸಕತ್ವ ಕಳೆದುಕೊಂಡಿದ್ದರಿಂದ ಯೋಜನೆ ವಿಳಂಬವಾಗಿದೆ.

ಕನ್ನಡ ಮತ್ತು ಮರಾಠಿ ಭಾಷೆಗಳೆರಡರಲ್ಲೂ ಧ್ವನಿ ರೂಪಿಸಲಾಗುತ್ತಿದೆ. ಸುಂದರವಾದ ಲೈಟಿಂಗ್ ಸಿಸ್ಟಂ ಅಳವಡಿಸಲಾಗುತ್ತಿದೆ.

Related Articles

Back to top button