Kannada NewsKarnataka NewsLatestPolitics
BREAKING: ಮೈತ್ರಿಕೂಟಕ್ಕೆ INDIA ಎಂದು ಮರುನಾಮಕರಣ; ಮಲ್ಲಿಕಾರ್ಜುನ ಖರ್ಗೆ ಘೋಷಣೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಲೋಕಸಭಾ ಚುನಾವಣೆಗೆ ತಯಾರಿ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ವಿಪಕ್ಷ ನಾಯಕರ ಮಹಾ ಮೈತ್ರಿಕೂಟ ಸಭೆ ಮುಕ್ತಯವಾಗಿದೆ.
ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮೈತ್ರಿ ಕೂಟಕ್ಕೆ ಹೊಸ ಹೆಸರು ಅಂತಿಮಗೊಳಿಸಲಾಗಿದೆ. INDIA ಎಂದು ಹೆಸರಿಡಲಾಗುವುದು ಎಂದು ಘೋಷಿಸಿದರು.
I-ಇಂಡಿಯನ್, N – ನ್ಯಾಷನಲ್, D ಡೆವಲಪ್ ಮೆಂಟ್, I -ಇನ್ ಕ್ಲೂಸಿವ್, A -ಅಲಯನ್ಸ್ ಎಂದು ತಿಳಿಸಿದರು. ದೇಶವೇ ನಮಗೆ ಮುಖ್ಯ ಹಾಗಾಗಿ ವಿಪಕ್ಷಗಳು ಒಂದಾಗಬೇಕಿದೆ. ಎಂದು ಒಗ್ಗಟ್ಟಿನ ಮಂತ್ರ ಪಠಿಸಿದ್ದಾರೆ.
ಇನ್ನು 11 ಜನರ ಕಮಿಟಿ ರಚಿಸಲು ತೀರ್ಮಾನಿಸಲಾಗಿದೆ. ಸದಸ್ಯರ ಹೆಸರನ್ನು ಸಧ್ಯದಲ್ಲಿಯೇ ಘೋಷಣೆ ಮಾದುತ್ತೇವೆ. ಕ್ಯಾಂಪೇನ್ ಮ್ಯಾನೇಜ್ ಮೆಂಟ್ ಗೆ ಕಾರ್ಯದರ್ಶಿ ನೇಮಕ ಮಾಡಲಾಗುವುದು. ದೆಹಲಿಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಮಹಾರಾಷ್ಟ್ರ ಹಾಗೂ ಮುಂಬೈನಲ್ಲಿ ಮತ್ತೊಂದು ಸಭೆ ನಡೆಸಲಾಗುವುದು ಎಂದು ತಿಳಿಸಿದರು.