Kannada NewsLatest

ಶ್ರಾವಣ ಮಾಸ ಪ್ರಯುಕ್ತ ವಿಶೇಷ ಉಪನ್ಯಾಸ ಕಾರ್ಯಕ್ರಮ

ಶ್ರಾವಣ ಮಾಸ ಪ್ರಯುಕ್ತ ವಿಶೇಷ ಉಪನ್ಯಾಸ ಕಾರ್ಯಕ್ರಮ

ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಶ್ರಾವಣ ಮಾಸದ ಪ್ರಯುಕ್ತ ಬೆಳಗಾವಿಯ ಕಾರಂಜಿ ಮಠದ ಶಿವಾನುಭವ ಮಂಟಪದಲ್ಲಿ ಶ್ರಾವಣ ಮಾಸದ ಪ್ರತಿ ಸೋಮವಾರ ವಿದ್ವಾಂಸರದಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮಗಳು ಜರುಗಲಿವೆ.

ಮೊದಲನೇ ಸೋಮವಾರ ಆ.5ಕ್ಕೆ ಸಂಜೆ 6ಕ್ಕೆ ಜ್ಞಾನದಾಸೋಹಿ ಗುಡ್ಡಾಪುರ ದಾನಮ್ಮ ವಿಷಯದ ಕುರಿತು ಬೈಲಹೊಂಗಲದ ಪ್ರೇಮಾ ಅಂಗಡಿ ಉಪನ್ಯಾಸ ನೀಡಲಿದ್ದಾರೆ.ಅಧ್ಯಕ್ಷತೆಯನ್ನು ಕಾರಂಜಿಮಠದ ಶ್ರೀ ಶಿವಯೋಗಿ ದೇವರು ವಹಿಸಲಿದ್ದಾರೆ. ಸಾನಿಧ್ಯವನ್ನು ಕಾರಂಜಿಮಠದ ಶ್ರೀ ಗುರುಸಿದ್ದ ಸ್ವಾಮೀಜಿ ವಹಿಸಲಿದ್ದಾರೆ.

ಎರಡನೇ ಸೋಮವಾರ ಆ.12 ಸಂಜೆ 6ಕ್ಕೆ ಮುಳಗುಂದ ಬಾಲಲೀಲಾ ಮಹಾಂತ ಶಿವಯೋಗಿಗಳ ಬದುಕು ಬೆಳಕು ವಿಷಯದ ಕುರಿತು ಶೇಗುಣಸಿ ವೀರಕ್ತಮಠದ ಶ್ರೀ ಮಹಾಂತ ದೇವರು ಅನುಭಾವ ನುಡಿಗಳನ್ನು ಆಡಲಿದ್ದಾರೆ. ಅಧ್ಯಕ್ಷತೆಯನ್ನು ರಾಣಿ ಚನ್ನಮ್ಮ ವಿವಿಯ ಪ್ರೊ. ಎಸ್.ಎಂ.ಗಂಗಾಧರಯ್ಯ ವಹಿಸಲಿದ್ದಾರೆ. ಸಾನಿಧ್ಯವನ್ನು ಕಾರಂಜಿಮಠದ ಗುರುಸಿದ್ದ ಸ್ವಾಮೀಜಿ ವಹಿಸಲಿದ್ದಾರೆ.

ಮೂರನೇ ಸೋಮವಾರ ಆ.19 ಸಂಜೆ 6ಕ್ಕೆ ಮಹಿಳಾಗೋಷ್ಠಿ ನಡೆಯಲಿದೆ. ಉಪನ್ಯಾಸವನ್ನು ಬೆಳಗಾವಿ ಜಿಲ್ಲಾಸ್ಪತ್ರೆಯ ಮನೋ ತಜ್ಞೆ ಡಾ.ಸರಸ್ವತಿ ತೆನಗಿ ನಡೆಸಿಕೊಡಲಿದ್ದಾರೆ. ಡಾ.ಸೋನಾಲಿ ಸರ್ನೋಬತ್, ಮೋನಿಕಾ ಸಾವಂತ, ಪತ್ರಕರ್ತೆ ಕೀರ್ತಿಶೇಖರ ಕಾಸರಗೋಡು, ಭಾರತಿ ಕುಡಚಿಮಠ ಅವರಿಗೆ ಶ್ರೀಮಠದಿಂದ ಗೌರವ ಸನ್ಮಾನ ಮಾಡಲಾಗುವುದು.ಸಾನಿಧ್ಯವನ್ನು ಕಾರಂಜಿಮಠದ ಗುರುಸಿದ್ದ ಸ್ವಾಮೀಜಿ ವಹಿಸಲಿದ್ದಾರೆ.

ನಾಲ್ಕನೇ ಸೋಮವಾರ ಆ.26ಕ್ಕೆ 229ನೇ ಮಾಸಿಕ ಶಿವಾನುಭವ ನಡೆಯಲಿದೆ. ಬೈಲಹೊಂಗಲ ಮೂರುಸಾವಿರ ಶಾಖಾ ಮಠದ ಶ್ರೀ ನೀಲಕಂಠ ಸ್ವಾಮೀಜಿ ಅರಭಾವಿ ದುರದುಂಡೇಶ್ವರ ಮಹಿಮೆಯ ಕುರಿತು ಅನುಭಾವ ನುಡಿಗಳನ್ನು ಆಡಲಿದ್ದಾರೆ. ನ್ಯಾಯವಾದಿ ಎಂ.ಜಿ.ಜೀರಲಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಾನಿಧ್ಯವನ್ನು ಕಾರಂಜಿಮಠದ ಗುರುಸಿದ್ದ ಸ್ವಾಮೀಜಿ ವಹಿಸಲಿದ್ದಾರೆ.

ಪ್ರತಿ ಸೋಮವಾರ ಎಸ್.ಎನ್.ಮುತಾಲಿಕದೇಸಾಯಿ ಹಾಗೂ ಕಾರಂಜಿಮಠದ ಶಿವಶರಣೆಯರಿಂದ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ ಎಂದು ಕಾರಂಜಿಮಠದ ಶ್ರೀ ಗುರುಸಿದ್ದ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button