ಪ್ರಗತಿವಾಹಿನಿ ಸುದ್ದಿ, ಗೋಕರ್ಣ: ಪುರಾಣ ಪ್ರಸಿದ್ದ ಗೋಕರ್ಣ ಕ್ಷೇತ್ರದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಶಾರ್ವರಿ ಸಂವತ್ಸರದ ಶ್ರಾವಣ ಮಾಸದ ವಿಶೇಷ ಪೂಜೆಗಳು ಅಮಾವಾಸ್ಯೆ ದಿನವಾದ ಬುಧವಾರ ಸುಸಂಪನ್ನವಾಯಿತು.
ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ, ಶ್ರೀ, ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ” ಅನುಗ್ರಹ ಪಡೆದು ಬೆಳಿಗ್ಗೆ ವಿಶೇಷಗಟ್ಲೆ ಪೂಜೆಗಳೊಂದಿಗೆ ಪ್ರಾರಂಭವಾಗಿ ಈ ಶ್ರಾವಣ ಮಾಸದ ವಿಶೇಷ ಪೂಜೆಯೊಂದಿಗೆ ಕೊನೆಗೊಂಡಿತು. ಈ ದಿನದ ಪೂಜೆಯನ್ನು ಅರ್ಚಕರಾದ ವಿದ್ವಾನ್ ಸಾಂಬ ಭಟ್ ಷಡಕ್ಷರಿ ಅವರಿಂದ ಶುಭಾರಂಭವಾಯಿತು. ಉಪಾಧಿವಂತರುಗಳು ಉಪಸ್ಥಿತರಿದ್ದರು.ಮಧ್ಯಾಹ್ನ ಮಹಾಪೂಜೆ ಅರ್ಚಕರಾದ ವೇ|| ಮೂ|| ಕೃಷ್ಣಭಟ್ ಷಡಕ್ಷರಿ ಅವರಿಂದ ಮಹಾಪೂಜೆ,ಸುವರ್ಣಶಂಖ ಗಂಗಾಭಿಷೇಕ, ನವರತ್ನಾಲಂಕಾರ, ಸುವರ್ಣ ನಾಗಾಭರಣ ಅಲಂಕಾರ, ರೂಢಿಗತ ಪರಂಪರೆಯಂತೆ 21 ವಿಶೇಷ ಭಕ್ಷಗಳ ನೈವೇದ್ಯದೊಂದಿಗೆ ಮಹಾಮಂಗಳಾರತಿವಂದಿಗೆ ಪೂಜೆ ಸಮಾಪ್ತಿಯಾಯಿತು. ಆಡಳಿತಾಧಿಕಾರಿ ಶ್ರೀ ಜಿ. ಕೆ. ಹೆಗಡೆಯವರಿಂದ ಸರ್ವಜನ ಕಲ್ಯಾಣಕ್ಕಾಗಿ ಪ್ರಾರ್ಥಿಸಿ ಶ್ರೀದೇವರ ಪ್ರಸಾದ ಸ್ವೀಕರಿಸಿದರು.
ಭಕ್ತರಿಲ್ಲದೆ ಇತಿಹಾಸ ಬರೆದ ಈ ವರ್ಷದ ಶ್ರಾವಣ : ಒಂದು ತಿಂಗಳ ಕಾಲ ರಾಜ್ಯ ವಿವಿದಡೆ ಮತ್ತು ಹೊರ ರಾಜ್ಯದಿಂದ ಭಕ್ತರು ಬಂದು ಪರಶಿವನ ದರ್ಶನ ಪೂಜೆ ನೆರವೇರಿಸುತ್ತಿದ್ದರು. ಆದರೆ ಈ ವರ್ಷ ಕೊವೀಡ್ 19 ಪರಿಣಾಮ ಭಕ್ತರಿಲ್ಲದಿದೆರುವುದು ಇತಿಹಾಸವಾಗಿದೆ. ದೇವಾಲಯದಲ್ಲಿ ಸೋಮವಾರ ಅತಿ ಹೆಚ್ಚು ಸಂಖ್ಯೆಯಲ್ಲಿ ಬರುವ ಭಕ್ತರಿಗಾಗಿಯೇ ಅಮೃತಾನ್ನ ವಿಭಾಗದಲ್ಲಿ ವಿಶೇಷ ಉಪಹಾರ ವ್ಯವಸ್ಥೆ ಮಾಡಲಾಗಗುತ್ತಿತ್ತು ಆದರೆ ಈ ವರ್ಷ ಇದಾವುದೂ ಇಲ್ಲದೆ ಶ್ರಾವಣ ಕೊನೆಕೊಂಡಿದೆ.
ವಾಣಿಜ್ಯ ಚಟುವಟಿಕೆ ಸ್ಥಬ್ಧ : ಇಲ್ಲಿನ ಪ್ರಮುಖ ದೇವಾಲಯದ ಎದರು ನಿಂತು ಹೂವು ಮಾರುವ ಹಾಲಕ್ಕಿ ಒಕ್ಕಲಿಗ ಮಹಿಳೆಯರಿಂದ ಹಿಡಿದು ವಿವಿಧ ಪೂಜಾ ಪರಿಕರ ಅಂಗಡಿಯವರು , ವಸತಿ ಗೃಹದವರು ವ್ಯಾಪಾರವಿಲ್ಲದೆ ಖಾಲಿ ಕುಳಿತ್ತಿದ್ದಾರೆ. ಇದರಂತೆ ದೇವಾಲಯಗಳಲ್ಲೂ ಭಕ್ತರಿಲ್ಲದೆ ದೇವಾಲಯಕ್ಕೆ ಆದಾಯವು ಇಲ್ಲವಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ