*ವಿಶೇಷ ಚೇತನ ಕ್ರೀಡಾಪಟುವಿನ ಕನಸು ನನಸು ಮಾಡಿದ ಸಚಿವ ಜಮೀರ್ ಅಹಮದ್ ಖಾನ್*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ತಮ್ಮ ತಾಯಿಯನ್ನು ಉಮ್ರಾ ಯಾತ್ರೆ ಕಳುಹಿಸಬೇಕು ಎಂಬ ಅಂತಾರಾಷ್ಟ್ರೀಯ ಕ್ರೀಡಾಪಟುವಿನ ಬಹಳ ವರ್ಷಗಳ ಕನಸನ್ನು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ನನಸು ಮಾಡಿದ್ದಾರೆ.
ಬೆಳಗಾವಿಯ ವೀರಭದ್ರ ನಗರ ನಿವಾಸಿ ವಿಶೇಷ ಚೇತನ ಕ್ರೀಡಾಪಟು ರಿಜ್ವಾನಾ ತಮ್ಮ ತಾಯಿಯನ್ನು ಉಮ್ರಾ ಯಾತ್ರೆ ಗೆ ಕಳುಹಿಸಲು ತನಗೆ ಬಂದಿದ್ದ ಪ್ರಶಸ್ತಿ ಮೊತ್ತ 25 ಸಾವಿರ ರೂ. ಜಮೆ ಮಾಡಿ ಉಳಿದ 75 ಸಾವಿರ ಮೊತ್ತ ಕೂಡಿಸಲು ಸಂಕಷ್ಟ ಪಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಸಚಿವರು, ಗುರುವಾರ ರಿಜ್ವಾನಾ ಹಾಗೂ ತಾಯಿ ದಿಲ್ ಶಾದ್ ಅವರನ್ನು ಕರೆದು ಒಂದು ಲಕ್ಷ ರೂ. ಚೆಕ್ ನೀಡಿದರು.
ಉಮ್ರಾ ಯಾತ್ರೆಯ ಸಂಪೂರ್ಣ ಮೊತ್ತ ಸಚಿವರೇ ಭರಿಸಿದ್ದಕ್ಕೆ ರಿಜ್ವಾನಾ ಹಾಗೂ ದಿಲ್ ಶಾದ್ ಅವರು ಸಂತಸ ವ್ಯಕ್ತಪಡಿಸಿ ಕೃತಜ್ಞತೆ ಸಲ್ಲಿಸಿದರು.
ರಿಜ್ವಾ ನಾ ಅವರ ತಂದೆ ಕಾಲ ವಾಗಿದ್ದು ತಾಯಿ ರಸ್ತೆ ಬದಿ ಬಟ್ಟೆ ವ್ಯಾಪಾರ ಮಾಡಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ