Belagavi NewsBelgaum NewsKannada NewsKarnataka News

*ಶ್ರೀ ಜಯತೀರ್ಥ ಶ್ರೀಪಾದಂಗಳವರ ಆರಾಧನೆ : ವಿವಿಧ ಸ್ಫರ್ಧೆ, ಪ್ರತಿಭಾ ಪುರಸ್ಕಾರ ಆಯೋಜನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪರಮಪೂಜ್ಯ ಶ್ರೀ ೧೦೦೮ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಆಜ್ಞೆ ಹಾಗೂ ಅನುಗ್ರಹದಿಂದ ಪ್ರತೀ ವರ್ಷದಂತೆ ಈ ಬಾರಿಯೂ ಬೆಳಗಾವಿಯ ವಿಶ್ವ ಮಧ್ವ ಮಹಾಪರಿಷತ್ತಿನ ವತಿನಿಂದ ಶ್ರೀ ೧೦೦೮ ಶ್ರೀ ಜಯತೀರ್ಥ ಶ್ರೀಪಾದಂಗಳವರ ಆರಾಧನೆಯನ್ನು ಆಷಾಢ ಕೃಷ್ಣ ಷಷ್ಠಿ ಜುಲೈ 26 ದಂದು ಮಾಡುವುದಾಗಿ ನಿಶ್ಚಿಸಲಾಗಿದೆ.‌

ಆ ದಿನ ಬೆಳಗ್ಗೆ 9 ರಿಂದ 11 ಗಂಟೆಯವರೆಗೆ ಶ್ರೀಹರಿವಾಯು ಸ್ತುತಿ ಪುನಶ್ಚರಣ ಹಾಗೂ ಶ್ರೀ ಜಯತೀರ್ಥಸ್ತುತಿ ಪಾರಾಯಣ, 11:30 ರಿಂದ 1 ಗಂಟೆವರೆಗೆ ಪಂಡಿತರಿಂದ ಉಪನ್ಯಾಸ ನಂತರ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದವರಿಗೆ ಬಹುಮಾನಗಳನ್ನು ವಿತರಿಸಲಾಗುವುದು. ತದನಂತರ ಎಲ್ಲರಿಗೂ ತೀರ್ಥ ಪ್ರಸಾದದ ವ್ಯವಸ್ಥೆ ಇರುತ್ತದೆ.

ಗುರುಗಳ ಆರಾಧನೆಗೆ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತನುಮನ ಧನದಿಂದ ತಮ್ಮ ಸೇವೆಯನ್ನು ಸಲ್ಲಿಸಬೇಕಾಗಿ ವಿನಂತಿ. ಧಾನ್ಯಗಳು ಹಾಗೂ ಇನ್ನಿತರ ಪದಾರ್ಥಗಳ ರೂಪದಲ್ಲಿಯೂ ಸೇವೆಯನ್ನು ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ- ಜಯತೀರ್ಥ ಸವದತ್ತಿ- 9113917712 ಅಥವಾ ಅಚ್ಯುತ ಪ್ರಯಾಗ- 9845854041

ಶ್ರೀ ಜಯತೀರ್ಥರ ಆರಾಧನೆಯ ನಿಮಿತ್ತ ವಿವಿಧ ಸ್ಪರ್ಧೆಗಳು

ವಿಶ್ವಮಧ್ವ ಮಹಾಪರಿಷತ್ ಬೆಳಗಾವಿ ಘಟಕದ ವತಿಯಿಂದ ಶ್ರೀ ಜಯತೀರ್ಥರ ಆರಾಧನೆ ನಿಮಿತ್ತವಾಗಿ ದಿನಾಂಕ 21.07.2024 ರವಿವಾರದಂದು ಶ್ರೀ ಸತ್ಯ ಪ್ರಮೋದತೀರ್ಥ ಸಭಾಗೃಹ, ರಾಣಿ ಚೆನ್ನಮ್ಮ ನಗರದಲ್ಲಿ ಸಾಯಂಕಾಲ 4.00 ರಿಂದ 6.00 ಗಂಟೆವರೆಗೆ 8 ರಿಂದ 15 ವರ್ಷದ ಮಕ್ಕಳಿಗಾಗಿ ಶ್ರೀ ಜಯತೀರ್ಥರ ಚಿತ್ರಕಲೆ ಸ್ಪರ್ಧೆ ಹಾಗೂ ಅವರ ಜೀವನ ಚರಿತ್ರೆ ಕುರಿತು ರಸಪ್ರಶ್ನೆ (ಪ್ರಶ್ನೆ ಪತ್ರಿಕೆ) 0bjective type questions ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಮತ್ತು ಭಜನಾ ಮಂಡಳಿಗಳು/ ಮಹಿಳೆಯರಿಗಾಗಿ ಶ್ರೀ ಜಯತೀರ್ಥರ ಕುರಿತು ರಂಗೋಲಿ ಬಿಡಿಸುವ ಸ್ಪರ್ಧೆಯನ್ನು ಕೂಡಾ ಏರ್ಪಡಿಸಲಾಗಿದೆ.
ಆದ್ದರಿಂದ ಎಲ್ಲರೂ ತಮ್ಮ ಮಕ್ಕಳನ್ನು ಪ್ರೋತ್ಸಾಹಿಸಿ ಈ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಮಾಡಿ ಆರಾಧನೆಗೂ ಕೂಡ ಕರೆದುಕೊಂಡು ಬಂದು ಶ್ರೀ ಜಯತೀರ್ಥರ ಅನುಗ್ರಹ ಹಾಗೂ ಗುರುಗಳಾದ ಶ್ರೀ ಸತ್ಯಾತ್ಮತೀರ್ಥರ ವಿಶೇಷ ಆಶೀರ್ವಾದ ಪಡೆದುಕೊಂಡು ಧನ್ಯರಾಗೋಣ ಎಂದು ಕೋರಲಾಗಿದೆ.

ದಿನಾಂಕ 26.07.2024 ರಂದು ಶುಕ್ರವಾರ ಶ್ರೀ ಜಯತೀರ್ಥರ ಆರಾಧನೆಯ ಸಂದರ್ಭದಲ್ಲಿ ಬಹುಮಾನಗಳನ್ನು ಕೂಡ ವಿತರಿಸಲಾಗುವುದು.

ಸ್ಪರ್ಧೆಯಲ್ಲಿ ಭಾಗವಹಿಸುವವರು ಇವರನ್ನು ಸಂಪರ್ಕಿಸಿ.

ರಾಧಾ ಗೊಗ್ಗಿ -9448706846

ಸುನಿತಾ ಅಂಬೇಕರ -9449308333


* ಪ್ರತಿಭಾ ಪುರಸ್ಕಾರ

ವಿಶ್ವಮಧ್ವ ಮಹಾಪರಿಷತ್ತಿನಿಂದ ಶ್ರೀ ಜಯತೀರ್ಥರ ಆರಾಧನೆಯ ನಿಮಿತ್ತವಾಗಿ ಹತ್ತನೇ ತರಗತಿಯಲ್ಲಿ 80% ಗಿಂತ ಅಧಿಕ ಅಂಕಗಳನ್ನು ಪಡೆದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವುದಾಗಿ ನಿರ್ಧರಿಸಲಾಗಿದ್ದು ವಿದ್ಯಾರ್ಥಿಗಳು ತಮ್ಮ ಹೆಸರು, ಫೋನ್ ನಂಬರ್, ಪಾಲಕರ ವಾರ್ಷಿಕ ಆದಾಯ ನಮೂದಿಸಿ ಅಂಕಪಟ್ಟಿಯ ಪ್ರತಿಯನ್ನು ನೀಡಬೇಕು. ಪುರಸ್ಕಾರವನ್ನು ನೀಡುವುದು ಮತ್ತು ಅದರ ಮಾಹಿತಿಯನ್ನು ಕಮಿಟಿಯ ಸದಸ್ಯರ ಚರ್ಚೆಯ ನಂತರ ತಮಗೆ ತಿಳಿಸಲಾಗುವುದು. ಈ ಪುರಸ್ಕಾರವನ್ನು ಶ್ರೀ ಸತ್ಯಪ್ರಮೋದ ತೀರ್ಥ ಸಭಾಗ್ರಹ ಚೆನ್ನಮ್ಮ ನಗರದಲ್ಲಿ ದಿನಾಂಕ 26.7.2024 ಶುಕ್ರವಾರದಂದು ಶ್ರೀ ಜಯತೀರ್ಥರ ಆರಾಧನೆಯ ದಿನ ಮಧ್ಯಾಹ್ನ 12 ಗಂಟೆಯ ನಂತರ ನೀಡಲಾಗುವುದು.ಆದ್ದರಿಂದ ವಿದ್ಯಾರ್ಥಿಗಳು ಬೇಗನೆ ಈ ಕೆಳಗಿನ ಸದಸ್ಯರನ್ನು ಸಂಪರ್ಕಿಸಿ ತಮ್ಮ ಮಾಹಿತಿಯನ್ನು ನೀಡಬೇಕಾಗಿ ವಿನಂತಿ.

    ವ್ಯಾಸಚಾರ್ಯ ಅಂಬೇಕರ -94483 77979
    ಮುರಳಿ ತೇರದಾಳ -8197788937

    ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

    Related Articles

    Back to top button