ಉಪಮುಖ್ಯಮಂತ್ರಿ ಸ್ಥಾನದ ಬಗ್ಗೆ ಪ್ರತಿಕ್ರಿಯಿಸಿದ ಶ್ರೀರಾಮುಲು
ಪ್ರಗತಿವಾಹಿನಿ ಸುದ್ದಿ – ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದ ಉಪಮುಖ್ಯಮಂತ್ರಿ ಸ್ಪರ್ಧೆಯಲ್ಲಿ ತಾವಿಲ್ಲ ಎಂದು ಮೊಣಕಾಲ್ನೂರು ಶಾಸಕ ಬಿ.ಶ್ರೀರಾಮು ಸ್ಪಷ್ಟಪಡಿಸಿದ್ದಾರೆ. ಅವರು ನಗರದ ತಮ್ಮ ನಿವಾಸದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಈ ಬಗ್ಗೆ ತಿಳಿಸಿದ್ದಾರೆ.
ಬಿ.ಎಸ್.ಯಡಿಯೂರಪ್ಪ ರಾಜ್ಯದಲ್ಲಿ ಸ್ಥಿರ ಆಡಳಿತ ನೀಡಲಿದ್ದಾರೆ. ಅವರ ಆಡಳಿತಕ್ಕೆ ಸಾಥ್ ನೀಡುವ ಶ್ರಮ ವಹಿಸುತ್ತೇವೆ, ಅದನ್ನು ಹೊರತು ಪಡಿಸಿ ಯಾವುದೇ ಆಸೆ ಆಕಾಂಕ್ಷೆಗೆ ಒಳಗಾಗುವುದಿಲ್ಲ ಎಂದಿದ್ದಾರೆ.
ತನಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕೆಂದು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಮಾನಿಗಳು ಬಯಸುತ್ತಿದ್ದಾರೆ ಎಂಬುದನ್ನು ನಾನು ಸಹ ನೋಡುತ್ತಿದ್ದೇನೆ ಎಂದು ಹೇಳಿದರು. ಹಾಗೆ, ದಶಕಗಳಿಂದ ಪಕ್ಷದ ಅಭಿವೃದ್ಧಿಗೆ ದಣಿದು ಕೆಲಸ ಮಾಡಿದ್ದೇನೆ, ನನ್ನ ಸೇವಾ ಕಾರ್ಯ ನೋಡಿ, ಆದ್ದರಿಂದ ನನ್ನ ಹೆಸರು ಹೊರಹೊಮ್ಮಿರಬಹುದು ಎಂದು ಹೇಳಿದರು.
ಹೇಗಾದರೂ, ಪಕ್ಷವು ಯಾವುದೇ ಜವಾಬ್ದಾರಿಯನ್ನು ನಿರ್ವಹಿಸಲು ಸೂಚಿಸಿದರೂ ಸಿದ್ಧವಾಗಿದ್ದೇನೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಯಡಿಯೂರಪ್ಪ ಅವರು ಸರಿಯಾದ ನಿರ್ಧಾರ ತೆಗೆದುಕೊಳ್ಳುವರು, ಅವರು ಯಾವುದೇ ಸ್ಥಾನ ನೀಡಿದರೂ ಸಮಗ್ರತೆಯಿಂದ ಕೆಲಸ ಮಾಡುವುದಾಗಿ ಹೇಳಿದರು.
ಅಷ್ಟೇ ಅಲ್ಲದೆ ಪಕ್ಷವನ್ನು ಬಲಪಡಿಸಲು ಅನೇಕರು ಶ್ರಮಿಸಿದ್ದಾರೆ ಮತ್ತು ಸರ್ಕಾರ ಸರಿಯಾಗಿ ಕಾರ್ಯನಿರ್ವಹಿಸಬೇಕಾದರೆ, ಪಕ್ಷದ ಎಲ್ಲರೂ ನಿರ್ಧಾರಗಳಿಗೆ ಬದ್ಧವಾಗಿರಬೇಕು ಎಂದು ಹೇಳಿದರು. ಸುದೀರ್ಘ ಹೋರಾಟದ ಮೂಲಕ ಯಡಿಯೂರಪ್ಪ ಮತ್ತೊಮ್ಮೆ ಮುಖ್ಯಮಂತ್ರಿಯಾಗಿದ್ದಾರೆ ಮತ್ತು ಅವರ ಆಡಳಿತದ ಸರ್ಕಾರ ಒಳ್ಳೆಯ ಬೆಳವಣಿಗೆಗಳನ್ನು ತರುತ್ತದೆ ಎಂದಿದ್ದಾರೆ////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ