Latest

*SSLC ಪರೀಕ್ಷೆಯಲ್ಲಿ ನಕಲು ಕೇಸ್; ಇನ್ನೂ9 ಶಿಕ್ಷಕರು ಸಸ್ಪೆಂಡ್*

ಪ್ರಗತಿವಾಹಿನಿ ಸುದ್ದಿ; ಬೀದರ್: ರಾಜ್ಯಾದ್ಯಂತ ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಯುತ್ತಿದ್ದು, ಹಲವು ಪರೀಕ್ಷ ಅಕೇಂದ್ರಗಳಲ್ಲಿ ಸಾಮೂಹಿಕ ನಕಲು ಪ್ರಕರಣ ಬೆಳಕಿಗೆ ಬಂದಿದ್ದು, ಶಿಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ.

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಶಿವಾಜಿ ಶಾಲೆಯಲ್ಲಿ ನಿನ್ನೆ ನಡೆದ ಇಂಗ್ಲೀಷ್ ವಿಷಯ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಸಾಮೂಹಿಕ ನಕಲು ಮಾಡಿದ್ದು, ಪ್ರಕರಣ ಸಂಬಂಧ 9 ಶಿಕ್ಷಕರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ್ದ ವೇಳೆ ಇಂಗ್ಲೀಷ್ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಸಾಮೂಹಿಕ ನಕಲು ಮಾಡುತ್ತಿದ್ದರು. ಇದಕ್ಕೆ ಸ್ವತ: ಶಿಕ್ಷಕರೇ ಪ್ರೋತ್ಸಾಹ ನೀಡುತ್ತಿರುವುದು ಕಂಡುಬಂದಿದೆ.

ಈ ಹಿನ್ನೆಲೆಯಲ್ಲಿ ಸಹ ಶಿಕ್ಷಕರಾದ ಶೇಷಪ್ಪ-ಭಾಲ್ಕಿ ಮೇಹಕರ ಸರ್ಕಾರಿ ಪ್ರೌಢಶಾಲೆ, ಸಂಪತ್-ಭಾಲ್ಕಿ ಲಾಧಾ ಸರ್ಕಾರಿ ಪ್ರೌಢಶಾಲೆ, ಗೋವಿಂದ-ಲಾಧಾ ಪ್ರೌಢಶಾಲೆ ಕುಪೇಂದ್ರ-ಕಲವಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಶಿವಾಜಿ-ನಾವದಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಾರುತಿ ರಾಥೋಡ್-ಕಾಕನಾಳ ಸರಕಾರಿ ಪ್ರೌಢ ಶಾಲೆ, ಶಿವಕುಮಾರ್ ಬಿರಾದಾರ – ಮಾಸಿಮಾಡ ಸರಕಾರಿ ಪ್ರೌಢ ಶಾಲೆ ಹಾಗೂ ಭೀಮ್ ರಾವ್-ಸಾಯಗಾಂವ್ ಸರಕಾರಿ ಪ್ರೌಢ ಶಾಲೆಯ ಶಿಕ್ಷಕರನ್ನು ಸಸ್ಪೆಂಡ್ ಮಾಡಲಾಗಿದೆ.

https://pragati.taskdun.com/sslc-examcopy-case16-teacherssuspended/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button