ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಸಾಧನೆ ಗೈದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ
ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ಜೊಲ್ಲೆ ಎಜ್ಯುಕೇಶನ್ ಸೊಸಾಯಟಿಯ ಅಂಗಸಂಸ್ಥೆಯಾದ ಶಿವಶಂಕರ ಜೊಲ್ಲೆ ಕನ್ನಡ ಪ್ರೌಢ ಶಾಲೆಯ ಸನ್ 2021-22 ನೇ ಸಾಲಿನ ಎಸ್.ಎಸ್.ಎಲ್.ಸಿ. ವಾರ್ಷಿಕ ಫಲಿತಾಂಶವು ಶೇ.100ರಷ್ಟಾಗಿದ್ದು ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲು ಸಂಸ್ಥೆಯು ಬಿರೇಶ್ವರ ಸಹಕಾರಿ ಸಭಾಗ್ರಹದಲ್ಲಿ ಅಭಿನಂದನಾ ಸಮಾರಂಭವನ್ನು ಏರ್ಪಡಿಸಿತ್ತು.
ಈ ಸಮಾರಂಭದ ಅಧ್ಯಕ್ಷತೆಯನ್ನು ಜೊಲ್ಲೆ ಉದ್ಯೋಗ ಸಮೂಹದ ಸಿ.ಇ.ಓಗಳಾದ ಶ್ರೀ ವಿವೇಕಾನಂದ ಬಂಕ್ಕೊಳ್ಳಿ ವಹಿಸಿಕೊಂಡು, ಭವ್ಯ ಭವಿಷ್ಯತ್ತಿನಲ್ಲಿ ವಿದ್ಯಾರ್ಥಿಗಳು ನಕ್ಷತ್ರಗಳಂತೆ ಹೊಳೆಯಲು ತಮ್ಮ ಪರಿಶ್ರಮದ ಜೊತೆಗೆ ಪಾಲಕರ ಹಾಗೂ ಶಿಕ್ಷಕರ ಮಾರ್ಗದರ್ಶನದಲ್ಲಿ ಶಿಕ್ಷಣ ಪಡೆಯುವುದು ಅವಶ್ಯಕ, ಪ್ರತಿಯೊಬ್ಬ ಗ್ರಾಮೀಣ ವಿದ್ಯಾರ್ಥಿಯು ಸೃಜನಶೀಲತೆಯೊಂದಿಗೆ, ಜಾಗತೀಕ ಮಟ್ಟದಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಲು ಮುಂದಾಗಬೇಕೆAದು ಮಾತನಾಡಿದರು.
ಬೀರೇಶ್ವರ ಕೋ ಆಫ್ ಕ್ರೆಡಿಟ್ ಸೊಸಾಯಟಿಯ (ಮಲ್ಟಿಸ್ಟೇಟ್) ಲಿ. ಯಕ್ಸಂಬಾದ ಪ್ರಧಾನ ವ್ಯವಸ್ಥಾಪಕರಾದ ಆರ್. ಸಿ. ಚೌಗಲಾ, ಕಾರ್ಯಕ್ರಮ ಉದ್ದೇಶಿಸಿ ನಮ್ಮ ಶಾಲೆಯು ಗ್ರಾಮೀಣ ಪ್ರದೇಶದಲ್ಲಿದ್ದರು ಒಳ್ಳೆಯ ಸೌಲಭ್ಯಗಳೊಂದಿಗೆ ಗುಣಾತ್ಮಕ ಶಿಕ್ಷಣ ನೀಡಿ ರಾಜ್ಯ ಮಟ್ಟದಲ್ಲಿ ಉತ್ತಮ ಫಲಿತಾಂಶ ನೀಡಿರುವುದು ಸಂತಸ ತಂದಿದೆ. ಹೀಗೆ ಮುಂದಿನ ವರ್ಷದ ಫಲಿತಾಂಶವು ಬರಲಿ ಎಂದು ಶುಭಹಾರೈಸಿದರು.
ಪಾಲಕರಾದ ಶ್ರೀ, ನಿರಂಜನ ಪಾಟೀಲ ರವರು ಮಾತನಾಡಿ ನಮ್ಮ ಮಗಳು ಇಂತಹ ಸಾಧನೆ ಮಾಡಲು ಸಂಸ್ಥೆಯ ಸಂಸ್ಥಾಪಕರು, ಚಿಕ್ಕೋಡಿ ಸಂಸದರಾದ, ಅಣ್ಣಾಸಾಹೇಬ ಶಂಕರ ಜೊಲ್ಲೆ, ಹಾಗೂ ಸಂಸ್ಥೆಯ ಅಧ್ಯಕ್ಷರು ಹಾಗೂ ಕರ್ನಾಟಕ ಸರ್ಕಾರದ ಮುಜರಾಯಿ ಹಜ್ ಮತ್ತು ವಕ್ಫ್ ಇಲಾಖೆಯ ಸಚಿವರಾದ ಸೌ, ಶಶಿಕಲಾ ಅಣ್ಣಾಸಾಹೇಬ ಜೊಲ್ಲೆ, ಇವರ ಒದಗಿಸಿಕೊಟ್ಟ ಮೂಲಭೂತ ಸೌಕರ್ಯಗಳು ಹಾಗೂ ಶಾಲೆಯ ಎಲ್ಲ ಶಿಕ್ಷಕರ ಒಳ್ಳೆಯ ಮಾರ್ಗದರ್ಶನ, ಶಾಲೆಯಲ್ಲಿ ಒಳ್ಳೆಯ ಫಲಿತಾಂಶಕ್ಕಾಗಿ ಹಾಕಿಕೊಂಡ ಯೋಜನೆಗಳು ಸಹಕಾರಿಯಾದವು ಈ ಶಾಲೆಗೆ ನಾವು ಸದಾ ಚಿರರೂಣಿಯಾಗಿರುತ್ತೇವೆ ಎಂದು ವ್ಯಕ್ತಪಡಿಸಿದರು.
ಶಾಲೆಯ ಮುಖ್ಯೋಪಾಧ್ಯಾಯರಾದ, ವ್ಹಿ. ಆರ್. ಭಿವಸೆ ರವರು ಎಲ್ಲರನ್ನು ಸ್ವಾಗತಿಸಿ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಎಸ್. ಜಿ. ಕಾಮತ, ವಿದ್ಯಾರ್ಥಿಗಳ ಪಾಲಕರು, ಶಾಲೆಯ ಶಿಕ್ಷಕವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಹ ಶಿಕ್ಷಕಿಯಾದ ಆರ್. ಎಂ. ಹಿರೇಮಠ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಗಚ್ಚಿನ ಮಠದ ಶಿವಬಸವ ಸ್ವಾಮೀಜಿಗಳ ನೇತೃತ್ವದಲ್ಲಿ ಅಥಣಿ ಪಟ್ಟಣ ಅಭಿವೃದ್ಧಿ ಪಥದಲ್ಲಿ ಸಾಗಲಿ: ಶಾಸಕ ಶ್ರೀಮಂತ ಪಾಟೀಲ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ