Belagavi NewsBelgaum NewsKannada NewsKarnataka NewsLatestUncategorized

*ಜೆಸಿಬಿ ಅಪಘಾತ ಪ್ರಕರಣ; ಗಾಯಗೊಂಡಿದ್ದ ಇನ್ನೋರ್ವ ಯುವಕ ಸಾವು*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಜೆಸಿಬಿ ಕ್ರೇನ್ ರಸ್ತೆ ಬದಿಯ ಗುಡ್ಡಕ್ಕೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ ಘಟನೆ ಕರೋಶಿಯ ಘಟ್ಟಗಿ ಬಸವ ದೇವಸ್ಥಾನದ ಬಳಿ ನಡೆದಿದೆ.

ಮೂರು ದಿನಗಳ ಹಿಂದೆ ನಡೆದಿದ್ದ ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇನ್ನೋರ್ವ ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದ್ದಾರೆ.

ವಿಜಯ ಅಶೋಕ ನಿಕಮ ( 28)ಮೃತ ದುರ್ದೈವಿ. ಮೂರು ದಿನಗಳ ಹಿಂದೆ ಕರೋಶಿಯ ಘಟ್ಟಗಿ ಬಸವನ ದೇವಸ್ಥಾನದ ಬಳಿ ಎದುರಿನಿಂದ ಬಂದ ವಾಹನವನ್ನು ತಪ್ಪಿಸುವ ಯತ್ನದಲ್ಲಿ ಜೆಸಿಬಿ ಕ್ರೇನ್ ನಿಯಂತ್ರಣ ತಪ್ಪಿ ಸಮೀಪದ ಗುಡ್ಡಕ್ಕೆ ಡಿಕ್ಕಿ ಹೊಡೆದು ಅಪಘಾತವಾಗಿತ್ತು. ಇದರಲ್ಲಿ ಸತ್ಯಪ್ಪ ಕಲಾಪ್ಪ ಖದ್ದಿ (27) ಎಂಬವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಉಳಿದ 6 ಯುವಕರು ಗಾಯಗೊಂಡಿದ್ದರು.

ಗಂಭೀರ ಗಾಯಗೊಂಡಿದ್ದ ಕರೋಶಿ ಗ್ರಾಮದ ಯುವಕ ವಿಜಯ ನಿಕಮನನ್ನು ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ವಿಜಯ ನಿಕಮ ಸಾವನ್ನಪ್ಪಿದ್ದಾರೆ.

Home add -Advt

Related Articles

Back to top button