Latest

ಮೂಕಾಂಬಿಕಾ ದೇವಾಲಯದಲ್ಲಿ ಸಲಾಂ ಮಂಗಳಾರತಿ ನಿಲ್ಲಿಸಿ; ಕಲ್ಲಡ್ಕ ಪ್ರಭಾಕರ್ ಭಟ್ ಆಗ್ರಹ

ಪ್ರಗತಿವಾಹಿನಿ ಸುದ್ದಿ; ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಪ್ರತಿದಿನ ಟಿಪ್ಪು ಹೆಸರಲ್ಲಿ ನಡೆಯುವ ಸಲಾಂ ಮಂಗಳಾರತಿಯನ್ನು ನಿಲ್ಲಿಸುವಂತೆ ಆರ್.ಎಸ್.ಎಸ್.ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಆಗ್ರಹಿಸಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಲ್ಲಡ್ಕ ಪ್ರಭಾಕರ್ ಭಟ್, ಟಿಪ್ಪು ಸುಲ್ತಾನ್ ನಮ್ಮ ದೇವರನ್ನು ಅವಮಾನ ಮಾಡಿದ್ದಾನೆ. ಸಮಾಜ ನಾಶ ಮಾಡಿದ್ದಾನೆ ಅಂಥವನ ಹೆಸರಲ್ಲಿ ದೇವರಿಗೆ ಮಂಗಳಾರತಿ ಮಾಡಿದರೆ ಅದರಿಂದ ದೇವರ ಶಕ್ತಿ ಕಡಿಮೆಯಾಗುತ್ತದೆ. ತಕ್ಷಣ ಸಲಾಂ ಮಂಗಳಾರತಿ ನಿಲ್ಲಿಸಿ, ದೇವರ ಹೆಸರಲ್ಲಿಯೇ ಪೂಜೆ, ಮಂಗಳಾರತಿಗಳು ನಡೆಯಲಿ ಎಂದು ಹೇಳಿದರು.

ಈವರೆಗೆ ಗೊತ್ತಿಲ್ಲದೇ ಇಂತಹ ಪದ್ಧತಿ ನಡೆದುಕೊಂಡುಬಂದಿದೆ. ಈಗ ವಿಷಯ ಗೊತ್ತಾಗಿದೆ. ಹಾಗಾಗಿ ಸಲಾಂ ಮಂಗಳಾರತಿ ನಿಲ್ಲಿಸಲಿ. ಬೇರೆ ಹೆಸರಲ್ಲಿ ಮಂಗಳಾರತಿ ನೆರವೇರಲಿ ಎಂದು ಹೇಳಿದರು.

ಹೀಗೆಯೇ ಮುಂದುವರೆದರೆ ಸ್ವಲ್ಪ ವರ್ಷವಾದ್ರೆ ಅಲ್ಲಾಹು ಸಲಾಂ ಅಂತ ಪೂಜೆ ಶುರು ಮಾಡಲು ಹೇಳುತ್ತಾರೆ. ನಮ್ಮ ದೇವಸ್ಥಾನಗಳಲ್ಲಿ ಸಲಾಂ ಪೂಜೆ ನಡೆಯಬಾರದು. ಮುಸ್ಲಿಂರು ಅವರ ಸ್ಥಳಗಳಲ್ಲಿ ಮಾಡಿಕೊಳ್ಳಲಿ ಎಂದು ಗುಡುಗಿದರು.

Home add -Advt

ಯುಗಾದಿ ಹಬ್ಬಕ್ಕೆ ಸಿಹಿ ಸುದ್ದಿ : ಚಿನ್ನ- ಬೆಳ್ಳಿ ದರದಲ್ಲಿ ಇಳಿಕೆ

Related Articles

Back to top button