*ಬಕೆಟ್ ನಲ್ಲಿ ಮೂತ್ರ ಮಾಡಿ ಅದೇ ನೀರಿನಲ್ಲಿ ನೆಲ ಒರೆಸಿದ ಮಹಿಳೆ*

ಪ್ರಗತಿವಾಹಿನಿ ಸುದ್ದಿ; ಲಕ್ನೌ: ಮನೆ ಕೆಲಸದವಳು ತನ್ನ ಮೂತ್ರದಿಂದ ಮನೆ ಒರೆಸಿರುವ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೊಯ್ಡಾದ ಅಜ್ ನಾರ್ ಹೌಸಿಂಗ್ ಸೊಸೈಟಿಯಲ್ಲಿ ನಡೆದಿದೆ.

ಬಕೆಟ್ ನಲ್ಲಿ ಮೂತ್ರ ವಿಸರ್ಜನೆ ಮಾಡಿ ಬಳಿಕ ಅದರಿಂದಲೇ ಮನೆಯ ನೆಲ ಒರೆಸುತ್ತಿರುವ ದೃಶ್ಯ ವೈರಲ್ ಆಗಿದೆ. ಮಾಲೀಕರ ದೂರು ಹಿನ್ನೆಲೆಯಲ್ಲಿ ಪೊಲೀಸರು ಮನೆ ಕೆಲಸದವಳಾದ ಸಬೀನಾಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಮಹಿಳೆ ಆರಂಭದಲ್ಲಿ ನಿರಾಕರಿಸಿದ್ದಾಳೆ ಬಳಿಕ ತಪ್ಪೊಪ್ಪಿಕೊಂಡಿದ್ದಾಳೆ.

Home add -Advt

ಆದರೆ ಈ ರೀತಿ ಮಾಡಲು ಕಾರಣವೇನು ಎಂಬ ಬಗ್ಗೆ ಸಬೀನಾ ಬಾಯಿಬಿಟ್ಟಿಲ್ಲ. ಸಬೀನಾ ಕಟುನ್ ನೆಲ ಒರೆಸುವ ವೇಳೆ ಬಕೆಟ್ ನಲ್ಲಿದ್ದ ನೀರಿಗೆ ಮೂತ್ರ ವಿಸರ್ಜನೆ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

https://pragati.taskdun.com/belagavi-policephone-in-programmesp/

Related Articles

Back to top button