Kannada NewsKarnataka News

ಅಂಬುಲೆನ್ಸ್ ಸೇವೆ ಆರಂಭ: ಅಗತ್ಯವಾದರೆ ಇಲ್ಲಿ ಸಂಪರ್ಕಿಸಿ

ಪ್ರಗತಿವಾಹಿನಿ ಸುದ್ದಿ, ಗೋಕಾಕ   ;- ಇಲ್ಲಿಯ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗ ದಳ ವತಿಯಿಂದ ನಗರದ ಕೊರೊನಾ ಸೋಂಕಿತರು ಹಾಗೂ ನಿಧನರಾದವರಿಗಾಗಿ ಪ್ರಾರಂಭಿಸಲಾದ ಉಚಿತ ಅಂಬುಲೆನ್ಸ್ ಸೇವೆಗೆ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು  ನಗರದ ಪಟಗುಂದಿ ಮಾರುತಿ ದೇವಸ್ಥಾನದ ಆವರಣದಲ್ಲಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಭಜರಂಗದಳ ಬೆಳಗಾವಿ ವಿಭಾಗ ಸಂಯೋಜಕ ಸದಾಶಿವ ಗುದಗ್ಗೋಳ ಮಾತನಾಡುತ್ತ, ಜನತೆ ಧೈರ್ಯದಿಂದ ಈ ಕೊರೊನಾ ವೈರಸ್‌ನ್ನು ಹೆದರಿಸಿ, ನಿಮ್ಮೊಂದಿಗೆ ನಾವಿದ್ದೇವೆ. ಈಗ ನಗರ ಘಟಕಕ್ಕೆ ಪ್ರಾರಂಭಿಸಲಾದ ಅಂಬುಲೆನ್ಸ್ ಸೇವೆಯನ್ನು ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗಕ್ಕೂ ನೀಡಲಾಗುವುದು. ಸರ್ಕಾರದ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ ಈ ಕೊರೊನಾ ರೋಗವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಹಕರಿಸುವಂತೆ ಕೋರಿದರು.
ಈ ಸೇವೆಗಾಗಿ ಲಕ್ಕಪ್ಪ ನಂದಿ – ೭೦೧೯೪೬೪೦೧೨ ಹಾಗೂ ಕಿರಣ ಉತಾರಿ ೯೧೦೮೭೬೪೪೯೯ ಸಂಖ್ಯೆಗಳಿಗೆ ಸಂಪರ್ಕಿಸಲು ಕೋರಲಾಗಿದೆ.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್‌ನ ತಾಲೂಕಾ ಕಾರ್ಯದರ್ಶಿ ಸಾಯಿಕುಮಾರ ನಾಯಿಕ, ಭಜರಂಗ ದಳದ ತಾಲೂಕಾ ಸಂಯೋಜಕ ಪುರುಷೋತ್ತಮ ಒಡೆಯರ್, ಪೊಲೀಸ್ ಇಲಾಖೆಯ ಎ.ಎಸ್.ಐ. ಆರ್.ಎಚ್.ಮುಲ್ಲಾ, ಹವಾಲ್ದಾರ ಆರ್.ಆರ್.ಕಿಚಡಿ, ಅರ್ಚಕ ಕೃಷ್ಣಾ ಹೊನ್ನತ್ತಿ ಸೇರಿದಂತೆ ಅನೇಕು ಇದ್ದರು.

Home add -Advt

ಮತ್ತೊಂದು ವಾರ ಲಾಕ್ ಡೌನ್ ವಿಸ್ತರಣೆ

Related Articles

Back to top button