Latest

ಗುಡ್ಡ ಕುಸಿತ ಪ್ರಕರಣ; ಮಣ್ಣಿನಡಿ ಸಿಲುಕಿದ್ದ ಮಕ್ಕಳು ಸಾವು

ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಮಂಗಳೂರಿನ ಗುರುಪುರದಲ್ಲಿ ಗುಡ್ಡಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಣ್ಣಿನಡಿ ಸಿಲುಕಿದ್ದ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಭಾರಿ ಮಳೆಯಿಂದಾಗಿ ಗುರುಪುರದ ಬೃಹತ್ ಬಂಗ್ಲೆಗುಡ್ಡ ಕುಸಿದು ನಾಲ್ಕು ಮನೆಗಳ ಮೇಲೆ ಬಿದ್ದಿತ್ತು. ಪರಿಣಾಮ ಮನೆಗಳೆಲ್ಲ ನೆಲಸಮವಾಗಿದ್ದು, ಇಬ್ಬರು ಮಕ್ಕಳು ಮಣ್ಣಿನಡಿ ಸಿಲುಕಿಕೊಂಡಿದ್ದರು.

Home add -Advt

ಪೊಲೀಸರು, ಎನ್ ಡಿ ಆರ್ ಎಫ್ ತಂಡ ಸೇರಿ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಮಕ್ಕಳನ್ನು ಹೊರತೆಗೆದುದ್ದು, ಮಕ್ಕಳಿಬ್ಬರೂ ಮೃತಪಟ್ಟಿದ್ದಾರೆ. ಮೃತರು 10 ವರ್ಷದ ಬಾಲಕಿ ಹಾಗೂ 6 ವರ್ಷದ ಬಾಲಕನಾಗಿದ್ದು, ಇಬ್ಬರೂ ಅಕ್ಕ-ತಮ್ಮ ಎಂದು ತಿಳಿದುಬಂದಿದೆ.

ಇಂದು ಮಧ್ಯಾಹ್ನದ ವೇಳೆ ಗುರುಪುರದಲ್ಲಿ ಈ ಘಟನೆ ಸಂಭವಿಸಿದ್ದು, ಇನ್ನೂ ಮೂರ್ನಾಲ್ಕು ಮನೆಗಳ ಮೇಲೆ ಮಣ್ನು ಕುಸಿಯುವ ಅಪಾಯವಿದ್ದು, ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗುತ್ತಿದೆ.

Related Articles

Back to top button