ಪ್ರಗತಿವಾಹಿನಿ ಸುದ್ದಿ: ರಾಜಭವನದಲ್ಲಿ ಮಂಗಳವಾರ ರಾಜ್ಯ ಮಾಹಿತಿ ಆಯೋಗದ ನೂತನ ಮುಖ್ಯ ಆಯುಕ್ತರು ಹಾಗೂ ಆಯುಕ್ತರ ಪ್ರಮಾಣ ಸ್ವೀಕಾರ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹಲೊಟ್ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಭಾಗವಹಿಸಿದ್ದರು.
ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್ ಪ್ರಮಾಣ ಸ್ವೀಕಾರ ಪ್ರಕ್ರಿಯೆ ನಿರ್ವಹಿಸಿದರು. ಮುಖ್ಯ ಆಯುಕ್ತರಾಗಿ ಆಶಿತ್ ಮೋಹನ್ ಪ್ರಸಾದ್, ಆಯುಕ್ತರಾಗಿ ರಾಮನ್. ಕೆ, ಡಾ. ಹರೀಶ್ ಕುಮಾರ್, ರುದ್ರಣ್ಣ ಹರ್ತಿಕೋಟೆ, ನಾರಾಯಣ ಜಿ. ಚನ್ನಾಳ, ರಾಜಶೇಖರ ಎಸ್, ಬದ್ರುದ್ದೀನ್ ಕೆ. ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಡಾ. ಮಮತಾ ಬಿ.ಆರ್. ಅವರು ಪ್ರಮಾಣ ಸ್ವೀಕರಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ