Karnataka News

*ಕೇಂದ್ರ ಸಚಿವೆ ಸೀತಾರಾಮನ್ ಗೆ ಮನವಿ ಸಲ್ಲಿಸಿದ ಕರ್ನಾಟಕದ ಕಾಂಗ್ರೆಸ್‌ ಸಂಸದರು*

ಪ್ರಗತಿವಾಹಿನಿ ಸುದ್ದಿ: ನಬಾರ್ಡ್ ನ ಅನುದಾನದ ಕೊರತೆ, ಎಲ್ಐಸಿ ಜೀವವಿಮಾ ಪ್ರತಿನಿಧಿಗಳ ಸಮಸ್ಯೆ ಸೇರಿದಂತೆ ಕರ್ನಾಟಕಕ್ಕೆ ವಿಶೇಷ ಅನುದಾನದ ಕುರಿತು ಕರ್ನಾಟಕದ ಸಂಸದರುಗಳು ಮಂಗಳವಾರ ನವದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

Home add -Advt


ಇಂದು ನವದೆಹಲಿಯಲ್ಲಿ ಕೇಂದ್ರ ಸರ್ಕಾರದ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಕರ್ನಾಟಕದ ಕಾಂಗ್ರೆಸ್‌ ಪಕ್ಷದ ಸಂಸದರಗಳೂ ಭೇಟಿಯಾಗಿ, ಕೇಂದ್ರ ಸರ್ಕಾರ ಮಂಡಿಸಿದ ಕೇಂದ್ರ ಬಜೆಟ್‌ ನಲ್ಲಿ ಕರ್ನಾಟಕಕ್ಕೆ ಯಾವುದೇ ವಿಶೇಷ ಅನುದಾನವಾಗಲಿ ಹಾಗೂ ಕೊಡುಗೆಗಳಾಗಲಿ ಇಲ್ಲದೇ ಇರುವುದನ್ನು ಅವರ ಗಮನಕ್ಕೆ ತರಲಾಯಿತು.


ಈ ಹಿಂದೆ ರಾಜ್ಯಕ್ಕೆ ನಿಗದಿಯಾದ ನಬಾರ್ಡ್ ರಿ ಫೈನಾನ್ಸ್‌ ಅನ್ನು ಕಡಿಮೆಗೊಳಿಸಿದ ಬಗ್ಗೆ ಹಾಗೂ ಎಲ್‌ ಐಸಿ ಪ್ರತಿನಿಧಿಗಳ ಬೇಡಿಕೆಯ ಬಗ್ಗೆ ಅವರ ಗಮನ ಸಳೆಯಲಾಯಿತು. ಅಲ್ಲದೇ ರಾಯಚೂರು ಜಿಲ್ಲೆಯ ಏಮ್ಸ್‌ ಸ್ಥಾಪಿಸುವ ಬಗ್ಗೆ ಅವರು ವಿಶೇಷ ಕಾಳಜಿ ವಹಿಸಬೇಕೆಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕರ್ನಾಟಕದ ಸಂಸದರುಗಳು ಆಗ್ರಹ ಪಡಿಸಿದರು.

ಈ ವೇಳೆ ಸಂಸದರುಗಳಾದ ಪ್ರಿಯಂಕಾ ಜಾರಕಿಹೊಳಿ, ಜಿ ಕುಮಾರ ನಾಯಕ, ರಾಜಶೇಖರ ಹಿಟ್ನಾಳ, ಸಾಗರ ಖಂಡ್ರೆ , ಶ್ರೇಯಸ್‌ ಪಾಟೀಲ, ಸುನಿಲ್‌ ಬೋಸ್‌, ಡಾ. ಪ್ರಭಾ ಮಲ್ಲಿಕಾರ್ಜುನ್‌ ಇದ್ದರು.

Related Articles

Back to top button