Latest

ಕಲ್ಲಿದ್ದಲು ಗಣಿ ಹರಾಜಿನಿಂದ ರೂ. 6,656 ಕೋಟಿಗಳ ಆದಾಯ – ಪ್ರಲ್ಹಾದ ಜೋಶಿ

  ಪ್ರಗತಿವಾಹಿನಿ ಸುದ್ದಿ, ನವದೆಹಲಿ: ದೇಶದ ಪ್ರಥಮ ವಾಣಿಜ್ಯಕರ ಯಶಸ್ವಿ ಗಣಿಗಾರಿಕೆ ಹರಾಜಿನಿಂದ ರಾಜ್ಯಗಳು ರೂ. 6,656 ಕೋಟಿಗಳ ಆದಾಯ ಪಡೆದೊಕೊಳ್ಳಲಿವೆ ಎಂದು ಸೋಮವಾರ ಕೇಂದ್ರ ಕಲ್ಲಿದ್ದಲು ಹಾಗೂ ಗಣಿ ಸಚಿವ ಶ್ರೀ ಪ್ರಲ್ಹಾದ ಜೋಶಿ ಹೇಳಿದರು.
ಹರಾಜು ಪ್ರಕ್ರಿಯೆ ನಂತರ ದೆಹಲಿಯಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ  ಜೋಶಿ, ಈ ಹರಾಜಿನಲ್ಲಿ ಒಟ್ಟು 19 ಗಣಿಗಾರಿಕೆಯನ್ನು ಯಶಸ್ವಿಯಾಗಿ ಹರಾಜು ಮಾಡಲಾಯಿತು. ಹಾಗೂ ಕಲ್ಲಿದ್ದಲು ಗಣಿಗಾರಿಕೆಯ ಯಾವುದೇ ಕಾಲಗಟ್ಟದಲ್ಲಿ ಇದೊಂದು ದಾಖಲೆಯ ಸಂಖ್ಯೆಯಾಗಿದೆ ಎಂದರು.
ಈ ಹರಾಜಿನ ಪರಿಣಾಮಗಳು ಐತಿಹಾಸಿಕವಾಗಿದ್ದು ಪ್ರಧಾನಿ ಮೋದಿಯವರ ಸಮರ್ಥ ಹಾಗೂ ದೂರದೃಷ್ಠಿಯ ನಾಯಕತ್ವದಲ್ಲಿ ದೇಶವನ್ನು ಕಲ್ಲಿದ್ದಲು ಕ್ಷೇತ್ರವನ್ನು ಖಾಸಗಿ ವಲಯಕ್ಕೆ ತೆರೆಯುವ ಹಾಗೂ ತನ್ಮೂಲಕ ಈ ಕ್ಷೇತ್ರದಲ್ಲಿ ಆತ್ಮ ನಿರ್ಭರತೆಗೆ ಸಜ್ಜುಗೊಳಿಸುವಲ್ಲಿ ಒಂದು ಸರಿಯಾದ ಹೆಜ್ಜೆಯಾಗಿದೆ ಎಂಬುದನ್ನು ಸ್ಪಷ್ಟಗೊಳಿಸಿದೆ ಎಂದೂ ಕೂಡಾ ಜೋಶಿ ವಿವರಿಸಿದರು.
ಮುಂದುವರೆದು ವಿವರಿಸಿದ ಸಚಿವ ಜೋಶಿ ಗಣಿಗಾರಿಕೆ ಕ್ಷೇತ್ರದಲ್ಲಿ ತೀರ್ವ ಸ್ಪರ್ಧೆ ಕಾಣುತ್ತಿದ್ದು ಗಣಿಗಾರಿಕೆ ಸಂಸ್ಥೆಗಳು ಹೆಚ್ಚಿನ ಪ್ರೀಮಿಯಂ ನೀಡಲು ಮುಂದೆ ಬರುತ್ತಿವೆ. ಅತೀ ಹೆಚ್ಚಿನ ಶೇ. 66.75%ಆಗಿದ್ದು ಸರಾಸರಿ ಪ್ರೀಮಿಯಂ ಶೇ 29% ಆಗಿ ಉಳಿದಿದೆ. ಒಟ್ಟು 38 ಗಣಿಗಳಿಗೆ ನಡೆಸಿದ ಈ ಹರಾಜಿನಲ್ಲಿ 19 ಹಣಕಾಸಿನ ಬಿಡ್ಡುಗಳನ್ನು ಸ್ವೀಕರಿಸಲಾಗಿದ್ದು ಹರಾಜಿನ ಯಶಸ್ಸಿನ ಪ್ರಮಾಣ ಶೇ. 50% ರಷ್ಟಾಗಿದೆ. ಆದರೆ ಹಿಂದಿನ ಅವದಿಯಲ್ಲಿ 10 ವಿಭಾಗಗಳಿಗೆ ನಡೆದ ಒಟ್ಟು 116 ಗಣಿಗಳ ಹರಾಜಿನಲ್ಲಿ ಒಟ್ಟು 35 ಗಣಿಗಳ ಹರಾಜು ಮಾತ್ರ ನಡೆದಿದ್ದು ಸರಾಸರಿ ಯಶಸ್ಸಿನ ಪ್ರಮಾಣ ಶೆ. 30% ರಷ್ಟಾಗಿದ್ದನ್ನೂ ಕೂಡಾ ಗಮನಿಸಬಹುದು.
ಹರಾಜಿನಲ್ಲಿಯ ಬಿಡ್ಡು ಪ್ರಕ್ರಿಯೆ ವಿವರ ನೀಡುತ್ತಾ ಸಚಿವ ಜೋಶಿ ಸುಮಾರು 65 ರಷ್ಟು ಬಿಡ್ಡುದಾರರು ಸ್ವಂತ ಅಥವಾ ಸ್ವಯಂ ಬಳಕೆದಾರರಲ್ಲದ ರಿಯಲ್ ಎಸ್ಟೇಟ್ ಮೂಲಭೂತ ಸೌಕರ್ಯ ಹಾಗೂ ಔಷಧ ತಯಾರಿಕಾ ಸಂಸ್ಥೆಗಳ ಕ್ಷೇತ್ರದವರಾಗಿದ್ದು `ಅಂತಿಮ ಬಳಕೆ’ ಆಧಾರಿತ ಅಂಶವನ್ನು ರದ್ದುಗೊಳಿಸಿದ ನಂತರ ಗಣಿ ಉದ್ಯಮ ನೀಡಿದ ಉತ್ತಮ ಸ್ಪಂದನೆಯಾಗಿದೆ ಎಂದರು. ಒಟ್ಟು 42 ಸಂಸ್ಥೆಗಳು ಭಾಗವಹಿಸಿದ್ದ ಈ ಹರಾಜಿನಲ್ಲಿ 40 ಖಾಸಗಿ ವಲಯ ಸಂಸ್ಥೆಗಳಾಗಿವೆ. ಇದಲ್ಲದೇ ನ್ಯಾಲ್ಕೋ ಹಾಗೂ ಆಂದ್ರಪ್ರದೇಶ ಖನಿಜ ಅಭಿವೃದ್ಧಿ ನಿಗಮದಂತಹ 2 ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಕೂಡಾ ಭಾಗವಹಿಸಿದ್ದವು.
ಹರಾಜಿನ 19 ಗಣಿಗಳಲ್ಲಿ 11 ಗಣಿಗಾರಿಕೆ ಭೂಮಿ ಮೇಲಿನದಾಗಿದ್ದು 5 ಗಣಿಗಳು ಭೂ ತಳದ ಗಣಿಗಾರಿಕೆಯಾಗಿವೆ ಹಾಗೂ ಉಳಿದ 3 ಗಣಿಗಳು ಭೂ ತಳ ಹಾಗೂ ಭೂಮಿಯ ಹೊರಮೈ ಗಣಿಗಾರಿಕೆಗಳಾಗಿದ್ದು 5 ರಾಜ್ಯಗಳಾದ ಮಧ್ಯಪ್ರದೇಶ, ಛತ್ತೀಸಘಡ, ಓರಿಸ್ಸಾ, ಜಾರ್ಖಂಡ್ ಹಾಗೂ ಮಹಾರಾಷ್ಟ್ರಗಳಲ್ಲಿವೆ ಹಾಗೂ ಒಟ್ಟು ಗರಿಷ್ಠ ಪ್ರಮಾಣದ ಸಾಮಥ್ರ್ಯದ 51 ಮಿಲಿಯನ್ ಟನ್ ಉತ್ಪಾದನಾ ಸಾಮಥ್ರ್ಯ ಹೊಂದಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಜೂನ್ 18 ರಂದು ಈ ವಾಣಿಜ್ಯ ಉಪಯೋಗದ ಕಲ್ಲಿದ್ದಲು ಗಣಿಗಳ ಹರಾಜಿಗೆ ಚಾಲನೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button