ಸ್ಟೆಮ್ ರೊಬೋಟಿಕ್ಸ ಇಂಜನಿಯರಿಂಗ್ ಪ್ರಯೋಗಾಲಯಕ್ಕೆ ಸಂಸದ ಈರಣ್ಣ ಕಡಾಡಿ ಚಾಲನೆ
ಪ್ರಗತಿವಾಹಿನಿ ಸುದ್ದಿ; ಮೂಡಲಗಿ: ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ ಈ ಪ್ರಮುಖ ವಿಭಾಗಗಳನ್ನು ವಿಲೀನಗೊಳಿಸುವ ಮೂಲಕ ಹೈಸ್ಕೂಲ್ ವಿದಾರ್ಥಿಗಳಿಗೆ ತಾಂತ್ರಿಕ ಕೌಶಲ್ಯ ಮತ್ತು ಜ್ಞಾನವನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಸ್ಟೆಮ್ ಲ್ಯಾಬ್ ಪ್ರಾರಂಭಿಸಲಾಗಿದೆ ಹಾಗೂ ವಿದ್ಯಾರ್ಥಿಗಳು ರೊಬೊಟ್ ಮತ್ತು ಡ್ರೋನ್ ತಂತ್ರಜ್ಞಾನದಲ್ಲಿ ನಿಪುಣರಾಗಲು ಈ ಸ್ಟೆಮ್ ಲ್ಯಾಬ್ ಒದಗಿಸಲಾಗಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ಶನಿವಾರ ನ-04 ರಂದು ಕಲ್ಲೋಳಿ ಪಟ್ಟಣದ ಪಂಡಿತ ಜವಾಹರಲಾಲ ನೆಹರು ಪ್ರೌಢ ಶಾಲೆಗೆ ಸನ್-2022-23ನೇ ಸಾಲಿನ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ನಿರ್ಮಿಸಲಾದ “ಸ್ಟೆಮ್ ರೊಬೋಟಿಕ್ಸ್ ಇಂಜನೀಯರಿಂಗ್ ಲ್ಯಾಬ್”ಗೆ ಚಾಲನೆ ನೀಡಿ ಮಾತನಾಡಿದರು.
ಸ್ಟೆಮ್ ಲ್ಯಾಬ್ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ್ದು, ವಿದ್ಯಾರ್ಥಿಗಳಲ್ಲಿ ಕಲಿಕೆ ಮತ್ತು ವಿಮರ್ಶಾತ್ಮಕ ಚಿಂತನೆ ಕೌಶಲ್ಯ ಬೆಳೆಸಲು ವಿನ್ಯಾಸಗೊಳಿಸಲಾಗಿದೆ. ಸ್ಟೆಮ್ ರೊಬೊಟಿಕ್ಸ್ ಲ್ಯಾಬ್ ಮೂಲಕ ವಿದ್ಯಾರ್ಥಿಗಳು ಪ್ರಯೋಗ ಮತ್ತು ಆವಿಷ್ಕಾರ ಮಾಡುವ ಕ್ರಿಯಾತ್ಮಕ ಕಲಿಕೆಯ ವಾತಾವರಣವನ್ನು ಇದು ಒದಗಿಸುತ್ತದೆ ಎಂದರು.
ರೊಬೊಟಿಕ್ಸ್ನೊಂದಿಗೆ, ಯುವ ಮನಸ್ಸುಗಳಿಗೆ ತಮ್ಮ ಸಾಮರ್ಥ್ಯವನ್ನು ಅನ್ವೇಷಿಸಲು ಮತ್ತು ಅವರ ಕನಸುಗಳನ್ನು ಪೋಷಿಸಲು, ಡಿಜಿಟಲ್ ಯುಗದಲ್ಲಿ ಅಭಿವೃದ್ಧಿ ಹೊಂದಲು ಅಗತ್ಯವಿರುವ ಜ್ಞಾನ ಮತ್ತು ಕೌಶಲ್ಯಗಳೊಂದಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುತ್ತೇವೆ. ಈ ಶಾಲೆಯು ನಾವಿನ್ಯತೆ ಮತ್ತು ತಾಂತ್ರಿಕ ಪ್ರಗತಿಯ ಕೇಂದ್ರವಾಗಲು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಎನ್.ಇ.ಎಸ್ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಎಸ್.ಆರ್. ಪಂಚಗಾಂವಿ, ಉಪಾಧ್ಯಕ್ಷ ಬಿ.ಎಸ್.ಗೋರೋಶಿ, ಭೀಮಪ್ಪ ಕಡಾಡಿ, ಕಾರ್ಯದರ್ಶಿ ಪ್ರಕಾಶ ಕುರಬೇಟ, ನಿರ್ದೇಶಕ ಬಿ.ಆರ್. ತೊಟಗಿ, ಎಪೆಕ್ಸ್ ಸಂಸ್ಥೆಯ ರಾಜುದ್ದಿಲ್ ಜಮಾದಾರ, ಪ್ರಭು ಕಡಾಡಿ, ಅಡಿವೆಪ್ಪ ಕುರಬೇಟ, ಗಿರಮಲ್ಲಪ್ಪ ಸಂಸುದ್ದಿ, ಪಂಚಾಕ್ಷರಿ ಹೆಬ್ಬಾಳ, ಈರಣ್ಣ ಮುನ್ನೋಳಿಮಠ, ಶಿವಪ್ಪ ಬಿ.ಪಾಟೀಲ, ಅಜೀತ ಚಿಕ್ಕೋಡಿ, ಪರಪ್ಪ ಮಳವಾಡ, ಶ್ರೀಮತಿ ಮಂಜುಳಾ ಹಿರೇಮಠ, ಬಾಳಪ್ಪ ಸಂಗಟಿ, ಕೃಷ್ಣಾ ಮುಂಡಿಗನಾಳ, ಗೂಳಪ್ಪ ವಿಜಯನಗರ, ಮುಖ್ಯೋಪಾಧ್ಯಯರಾದ ಶ್ರೀಮತಿ ಕೆ. ಎಂ. ಬೈರನಟ್ಟಿ, ಡಿ.ಎಸ್ ಗಿರಡ್ಡಿ, ಬಿ.ಆರ್. ಚಿಪ್ಪಲಕಟ್ಟಿ, ಎಸ್.ವಿ ಕೌತನಾಳ, ಬಿ.ಎಸ್. ಕ್ಯಾಸ್ತಿ, ದುಂಡಪ್ಪ ಕುರಬೇಟ ಸೇರಿದಂತೆ ಸಂಸ್ಥೆಯ ಸದಸ್ಯರು, ಶಿಕ್ಷಕರು, ಸಿಬ್ಬಂದಿ ವರ್ಗ, ಕಾರ್ಯಕರ್ತರು ಉಪಸ್ಥಿತರಿದ್ದರು.
ಶಿಕ್ಷಕ ಎ.ಸಿ.ಅಕ್ಕಿ ಸ್ವಾಗತಿಸಿದರು, ಆರ್ ಎಸ್.ಬಡೆದ ಕಾರ್ಯಕ್ರಮ ನಿರೂಪಿಸಿದರು, ವಿ ವಾಯ್.ಕೊಳದೂರ ಪ್ರಾಸ್ತಾವಿಕವಾಗಿ ಮಾತನಾಡಿದರು, ಉಮೇಶ ನುಗ್ಗಾನಟ್ಟಿ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ