Cancer Hospital 2
Bottom Add. 3

*ಕೃತಕಾಂಗಗಳ ಜೋಡಣೆ ಮಹತ್ವ ತಿಳಿಸಿದ ಪ್ರೊ. ನಿತಿನ್ ಗಂಗಾಣೆ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಪ್ರಾಸ್ಥೆಟಿಕ್ಸ್ ಮತ್ತು ಆರ್ಥೋಟಿಕ್ಸ್ (ಕೃತಕ ಕಾಲು) ವಿಭಾಗವು ಏರ್ಪಡಿಸಿದ್ದ 2ನೇ ಅಂತರಾಷ್ಟ್ರೀಯ ಪ್ರಾಸ್ಥೆಟಿಕ್ಸ್ ಮತ್ತು ಆರ್ಥೋಟಿಕ್ಸ್ ದಿನವನ್ನು ಆಚರಿಸಲಾಯಿತು.

ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಕಾಹೆರನ ಉಪಕುಲಪತಿಗಳಾದ ಪ್ರೊ. ನಿತಿನ್ ಗಂಗಾಣೆ ಅವರು, ವಿಭಿನ್ನ ಪ್ರಕ್ರಿಯೆಗಳ ಮೂಲಕ ಕೃತಕಾಂಗಗಳನ್ನು ಜೋಡಿಸುವ ಕಾರ್ಯ ಅತ್ಯಂತ ಸವಾಲಿನದ್ದು. ಅಂಗವಿಕಲತೆಯಿಂದ ಬಳಲುತ್ತಿರುವವರಿಗೆ ಅನುಕೂಲ ಕಲ್ಪಿಸಲು ಕೃತಕಾಂಗಗಳು ಅತ್ಯವಶ್ಯವಾಗಿ ಬೇಕು. ಆದ್ದರಿಂದ ಅಗತ್ಯವಿರುವ ದಿವ್ಯಾಂಗರಿಗೆ ಉತ್ತಮ ಚಿಕಿತ್ಸೆ ನೀಡಲು ಮತ್ತು ಸರ್ಕಾರದಿಂದ ವಿವಿಧ ಯೋಜನೆಗಳನ್ನು ಜಾರಿಗೊಳಿಸಿ, ಅಂಗವಿಕಲರನ್ನು ಸಬಲೀಕರಣಗೊಳಿಸಬೇಕು ಎಂದು ಹೇಳಿದರು.


ಈ ಸಂದರ್ಭದಲ್ಲಿ ಕಾಹೆರನ ಕುಲಸಚಿವರಾದ ಡಾ ಎಂ ಎಸ್ ಗಣಾಚಾರಿ ಮಾತನಾಡಿದರು. ಫಿಸಿಯೋಥೆರಪಿ ಮಹಾವಿದ್ಯಾಲಯದ ಪ್ರಾಚರ‍್ಯರಾದ ಡಾ ಸಂಜೀವ್ ಕುಮಾರ್ ಅವರು ಮಾತನಾಡಿ, ರೋಗಿಗಳ ಚಿಕಿತ್ಸೆಗಾಗಿ ಕೃತಕಾಂಗಗಳ ಕ್ಷೇತ್ರದಲ್ಲಿ ಅತ್ಯುನ್ನತ ತಂತ್ರಜ್ಞಾನವನ್ನು ಬಳಸಿಕೊಳ್ಳುವಂತೆ ಸಲಹೆ ನೀಡಿದರು.


ವಿಕಲಚೇತನರಿಗೆ ಅತ್ಯುತ್ತಮವಾಗಿ ಸಹಾಯ ಮಾಡುವ ಪ್ರತಿಜ್ಞೆಯನ್ನು ತೆಗೆದುಕೊಳ್ಳಲಾಯಿತು. ಪ್ರಾಸ್ಥೆಟಿಕ್ಸ್ ಮತ್ತು ಆರ್ಥೋಟಿಕ್ಸ್ ವಿಭಾಗದ ಎಚ್‌ಒಡಿ ಡಾ ರಿತಿಕೇಶ್ ಪಟ್ನಾಯಕ್ ಡಾ ಸಿಬಾನಿ ಪ್ರಿಯದರ್ಶಿನಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Bottom Add3
Bottom Ad 2

You cannot copy content of this page