Belagavi NewsBelgaum NewsKannada NewsKarnataka NewsLatest

*ಬೆಳಗಾವಿ: ದಂಡು ಮಂಡಳಿ ಸಿಇಒ ನಿಗೂಢ ಸಾವು*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ದಂಡು ಮಂಡಳಿ ಸಿಇಒ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಕ್ಯಾಂಪ್ ಪ್ರದೇಶದ ಮನೆಯಲ್ಲಿ ನಡೆದಿದೆ.

ಕೆ.ಆನಂದ್ ಮೃತ ದುರ್ದೈವಿ. ತಮ್ಮ ನಿವಾಸದಲ್ಲಿಯೇ ಕೆ.ಆನಂದ್ ಶವವಾಗಿ ಪತ್ತೆಯಾಗಿದ್ದು, ಸಾವಿನ ಸುತ್ತ ಅನುಮಾನ ವ್ಯಕ್ತವಾಗಿದೆ.

Home add -Advt

ಮೂಲತ: ತಮಿಳುನಾಡಿನವರಾದ ಕೆ.ಆನಂದ್ ಬೆಳಗಾವಿಯ ದಂಡು ಮಂಡಳಿ ಸಿಇಒ ಆಗಿ ಕಳೆದ ಒಂದು ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದರು. ಇಂದು ಬೆಳಿಗ್ಗೆ ಎಷ್ಟುಹೊತ್ತಾದರೂ ಮನೆ ಬಾಗಿಲು ತೆರೆಯದಿದ್ದಾಗ ಸಿಬ್ಬಂದಿಗಳು ಕ್ಯಾಂಪ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಆಗಮಿಸಿ ಬಾಗಿಲು ತೆರೆದಾಗ ಆನಂದ್ ಶವಾಗಿ ಪತ್ತೆಯಾಗಿದ್ದಾರೆ.

ದಂಡು ಮಂಡಳಿಯಲ್ಲಿ ಅಕ್ರಮ ನೇಮಕ ಪ್ರಕರಣ ಸಂಬಂಧ ವಾರದ ಹಿಂದೆ ದಂಡು ಮಂಡಳಿ ಕಚೇರಿ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದರು. ಇದರ ಬೆನ್ನಲ್ಲೇ ಇದೀಗ ಸಿಇಒ ಸಾವನ್ನಪ್ಪಿದ್ದು, ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ.

Related Articles

Back to top button