*ಡೆಡ್ ಲೈನ್ ಮುಕ್ತಾಯ*: *ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಡಿಜಿ-ಐಜಿಪಿ ಕಚೇರಿಗೆ ಜೆಡಿಎಸ್ ಮುತ್ತಿಗೆ ಯತ್ನ*

ಪ್ರಗತಿವಾಹಿನಿ ಸುದ್ದಿ: ಸ್ಟಿಂಗ್ ಆಪರೇಷನ್ ಕಿಂಗ್ ಪಿನ್ ನನ್ನು ಎರಡು ದಿನಗಳಲ್ಲಿ ಬಂಧಿಸುವಂತೆ ಬೆಂಗಳೂರು ಪೊಲೀಸರಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಡೆಡ್ ಲೈನ್ ನೀಡಿದ್ದರು. ಆದರೆ ಎರಡು ದಿನಗಳು ಕಳೆದರೂ ಇನ್ನೂ ಸ್ಟಿಂಗ್ ಆರೋಪಿಯನ್ನು ಪೊಲೀಸರು ಬಂಧಿಸಿಲ್ಲ. ಇದರಿಂದ ಸಿಡಿದೆದ್ದಿರುವ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್ ಕಾರ್ಯಕರ್ತರು ಡಿಜಿ-ಐಜಿಪಿ ಕಚೇರಿಗೆ ಮುತ್ತಿಗೆ ಹಾಕಲು ಮುಂದಾಗಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಜೆಡಿಎಸ್ ಬೃಹತ್ ಸಭೆ ನಡೆಸಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಗಡುವು ಮುಗಿದರೂ ಈವರೆಗೂ ಸ್ಟಿಂಗ್ ಆಪರೇಷನ್ ಆರೋಪಿಯನ್ನು ಬಂಧಿಸಲಾಗಿಲ್ಲ. ಸ್ತಿಂಗ್ ಆಪರೇಷನ್ ವಿಚಾರವಾಗಿ ತನಿಖೆ ನಡೆಸಲು ಮುಕ್ತವಾಗಿ ಅವಕಶಾ ನೀಡಿಲ್ಲ. ಪ್ರಮುಖ ಆರೋಪಿಯನ್ನು ಸರ್ಕಾರವೇ ರಕ್ಷಣೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಟಿಂಗ್ ಆರೋಪಿಯನ್ನು ಸಿಎಂ ಪದೇ ಪದೇ ಭೇಟಿಯಾಗುತ್ತಿದ್ದರು. ನಾನೇ ವಿಡಿಯೋ ಮಾಡೊದ್ದೇನೆ ಎಂದು ಆತ ನಿನ್ನೆ ಒಪ್ಪಿಕೊಂಡಿದ್ದಾನೆ. ನನ್ನ ಹೋರಾಅಟ ವೈಯಕ್ತಿಕವಲ್ಲ. ಹಬ್ಬದ ಬಳಿಕ ಹೋರಾಟ ಮತ್ತಷ್ಟು ತೀವ್ರಗೊಳಿಸುತ್ತೇನೆ ಎಂದು ಹೇಳಿದರು.
ಬಳಿಕ ಫ್ರೀಡಂ ಪಾರ್ಕ್ ನಿಂದ ಜೆಡಿಎಸ್ ಕಾರ್ಯಕರ್ತರು ನೃಪತುಂಗ ರಸ್ತೆಯಲ್ಲಿರಿವ ಡಿಜಿ-ಐಜಿಪಿ ಕಚೇರಿಯತ್ತ ಸಾಗಿದ್ದು, ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ಕಚೇರಿ ಬಳಿ ಬ್ಯಾರಿಕೇಡ್ ಗಳನ್ನು ಅಳವಡಿಸಿ ತದೆಯೊಡ್ದಿದರು. ಡಿಜಿ-ಐಜಿಪಿ ಕಚೇರಿ ಬಳಿಯೇ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ.
ಇದೇ ವೇಳೆ ಡಿಜಿ-ಐಜಿಪಿ ಕಚೇರಿಗೆ ಆಗಮಿಸಿದ ಹೆಚ್.ಡಿ.ಕುಮಾರಸ್ವಾಮಿ, ಡಿಜಿ-ಐಜಿಪಿ ಸಲೀಂ ಅವರಿಗೆ ಮನವಿ ಸಲ್ಲಿಸಿದರು. ಸ್ಟಿಂಗ್ ಆಪರೇಷನ್ ಆರೋಪಿಯನ್ನು ಬಂಧಿಸುವಂತೆ ಹಾಗೂ ಪ್ರಕರಣದ ತನಿಖೆ ನಡೆಸುವಂತೆ ಒತ್ತಾಯಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



