
ಪ್ರಗತಿವಾಹಿನಿ ಸುದ್ದಿ: ಸೆ.30 ರಂದು ರಾತ್ರಿ 10 ಗಂಟೆಯ ಸುಮಾರಿಗೆ ಮಧ್ಯ ಫಿಲಿಪೈನ್ಸ್‌ನಲ್ಲಿ 6.9 ತೀವ್ರತೆಯಲ್ಲಿ ಭೂಕಂಪ ಸಂಭವಿಸಿದ್ದು ಯುಎಸ್‌ಜಿಎಸ್ ಪ್ರಕಾರ, ಪಲೊಂಪನ್‌ನ ಪಶ್ಚಿಮಕ್ಕೆ ಸಮುದ್ರದಲ್ಲಿ ಸುಮಾರು 10 ಕಿಲೋಮೀಟರ್ ಆಳದಲ್ಲಿ ಕೇಂದ್ರಬಿಂದುವನ್ನು ಗುರುತಿಸಲಾಗಿದೆ.
ಪ್ರಭಲ ಭೂಕಂಪ ಹಿನ್ನೆಲೆಯಲ್ಲಿ ಹಲವು ಕಟ್ಟಡಗಳು ಧರೆಗುರುಳಿವೆ. 20ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸುನಾಮಿ ಎಚ್ಚರಿಕೆಯನ್ನೂ ಕೂಡ ನೀಡಲಾಗಿದೆ.
ಸೇತುವೆ ಮೇಲೆ ವಾಹನಗಳು ಚಲಿಸುತ್ತಿರುವಾಗ ಈ ಭೂಕಂಪ ಸಂಭವಿಸಿದೆ. ಸೇತುವೆಯಾ ಅಥವಾ ತೂಗು ಸೇತುವೆಯಾ ಎನ್ನುವ ಅನುಮಾನ ಬರುವಷ್ಟರ ಮಟ್ಟಿಗೆ ಅಲುಗಾಡಿದೆ.
ಭೂಕಂಪದ ಕೇಂದ್ರಬಿಂದು ಬೊಗೊದಿಂದ ಈಶಾನ್ಯಕ್ಕೆ 17 ಕಿ.ಮೀ ದೂರದಲ್ಲಿತ್ತು. ಭೂಕಂಪಕ್ಕೆ ಸಂಬಂಧಿಸಿದಂತೆ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.