Latest

ಹದ್ದು ಮೀರಿದ ವಿದ್ಯಾರ್ಥಿಗಳ ಸೆಕ್ಸ್ ವಿಡಿಯೋ ಲೀಕ್; ಪೊಲೀಸರಿಂದ ತನಿಖೆ

ಪ್ರಗತಿವಾಹಿನಿ ಸುದ್ದಿ, ಮಂಗಳೂರು: ಎಲ್ಲರ ಸಮ್ಮುಖದಲ್ಲೇ ವಿದ್ಯಾರ್ಥಿನಿಯನ್ನು ಚುಂಬಿಸಿ ಪೌರುಷ ಮೆರೆದಿದ್ದ ವಿದ್ಯಾರ್ಥಿ ಅದೇ ವಿದ್ಯಾರ್ಥಿನಿ ಜತೆಗಿನ ಸೆಕ್ಸ್ ವಿಡಿಯೋ ಬಹಿರಂಗಗೊಂಡಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇಲ್ಲಿನ ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿ ತನ್ನ  ಸಹಪಾಠಿಗಳ ಸಮ್ಮುಖದಲ್ಲೇ   ವಿದ್ಯಾರ್ಥಿನಿಯನ್ನು ಚುಂಬಿಸುವ ಚಾಲೆಂಜ್ ನಡೆದಿತ್ತು. ಇದಕ್ಕಾಗಿ ಎಳ್ಳಷ್ಟೂ ಅಳುಕದ ವಿದ್ಯಾರ್ಥಿ ಎಲ್ಲ ಸಹಪಾಠಿಗಳ ಸಮ್ಮುಖದಲ್ಲೇ ವಿದ್ಯಾರ್ಥಿನಿಯನ್ನು ಚುಂಬಿಸಿದ್ದಾನೆ. ವಿದ್ಯಾರ್ಥಿನಿ ನಗುನಗುತ್ತ ಎಲ್ಲವನ್ನೂ ಸ್ವೀಕರಿಸಿದ್ದಾಳೆ.

ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಪ್ರಜ್ಞಾವಂತರೆಲ್ಲ ಕೆಂಗಣ್ಣು ಬಿಟ್ಟಿದ್ದರು. ಬಾಜಿ ಗೆದ್ದ ಯುವಕನಿಗಿಂತ ಎಳ್ಳಷ್ಟೂ ಪ್ರತಿರೋಧವಿಲ್ಲದೆ ಬಾಜಿ ಗೆಲ್ಲಲು ಸಹಕರಿಸಿದ ವಿದ್ಯಾರ್ಥಿನಿ ಬಗ್ಗೆಯೂ ಸಾಕಷ್ಟು ಆಕ್ರೋಶಗಳು ವ್ಯಕ್ತವಾಗಿದ್ದವು.

ಈ ಪ್ರಕರಣದ ಬೆನ್ನಿಗೇ ವಿದ್ಯಾರ್ಥಿಯ ಮೊಬೈಲ್ ಪರಿಶೀಲಿಸಿದಾಗ ಇನ್ನಷ್ಟು ಮುಂದುವರಿದ ವಿಡಿಯೋಗಳು ಎಲ್ಲರನ್ನೂ ಬೆಚ್ಚಿಬೀಳಿಸಿವೆ. ಈ ವಿಡಿಯೋದಲ್ಲಿ ವಿದ್ಯಾರ್ಥಿನಿ ವಿದ್ಯಾರ್ಥಿಗಳ   ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದು  ಈ ವಿಡಿಯೋ ಸಹ ಜಾಲತಾಣಗಳಲ್ಲಿ ಅಪ್ ಲೋಡ್ ಆಗಿದೆ.

Home add -Advt

ವಿದ್ಯಾರ್ಥಿಗಳ ಹದ್ದು ಮೀರಿದ ವರ್ತನೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದ್ದು ಪ್ರತಿಷ್ಠಿತ ಕಾಲೇಜಿನವರೂ ಮುಜುಗರಕ್ಕೀಡಾಗಿದ್ದಾರೆ. ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ವಿದ್ಯಾರ್ಥಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

https://pragati.taskdun.com/crime-news/video-black-mailtwo-arrestedbangalore/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button