Kannada NewsKarnataka NewsLatest

ಬೆಳಗಾವಿ: ಮುಖ್ಯ ವೃತ್ತಕ್ಕೆ ‘ರೈತ ವೃತ್ತ’ ನಾಮಕರಣ ಮಾಡಿದ ರೈತ ಸಂಘಟನೆಗಳು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  42ನೇ ರೈತ ಹುತಾತ್ಮ ದಿನಾಚರಣೆ ಸಂದರ್ಭದಲ್ಲೇ ನಾನಾ ರೈತ ಸಂಘಟನೆಗಳ ಪದಾಧಿಕಾರಿಗಳು ಬೆಳಗಾವಿ ನಗರದಲ್ಲಿ ಸಾಂಬ್ರಾ ರಸ್ತೆಯಿಂದ ಮಹಾನಗರ ಪ್ರವೇಶಿಸುವ ಮುಖ್ಯ ವೃತ್ತಕ್ಕೆ ‘ರೈತ ವೃತ್ತ’ ಎಂದು ನಾಮಕರಣ ಮಾಡಿದರು.

ಸಾಂಬ್ರಾ ರಸ್ತೆಯಲ್ಲಿ   ರಾಷ್ಟ್ರೀಯ ಹೆದ್ದಾರಿ 4ರ ಓವರ್‌ ಬ್ರಿಡ್ಜ್ ಬಳಿಯ ವೃತ್ತಕ್ಕೆ ‘ರೈತ ವೃತ್ತ’ ಎಂದು ನಾಮಕರಣ ಮಾಡಿ ಬ್ಯಾನರ್ ಅಳವಡಿಸಿದ ರೈತ ಸಂಘಟನೆಗಳ ಪದಾಧಿಕಾರಿಗಳು,  ರೈತ ಸಂಘಟನೆಗಳಿಗೆ ಜಯಕಾರದ ಘೋಷಣೆ ಕೂಗಿದರು.

Home add -Advt

ರೈತಮುಖಂಡರಾದ ಶಶಿಕಾಂತ ಪಡಸಲಗಿ, ಚೂನಪ್ಪ ಪೂಜೇರಿ, ಪ್ರಕಾಶ್ ನಾಯಕ, ಭೀಮಸೇನ ಕಾಂಬಳೆ ಸೇರಿದಂತೆ ಹಲವಾರು ರೈತ ಮುಖಂಡರು, ಮಹಿಳೆಯರು ಉಪಸ್ಥಿತರಿದ್ದರು.

ಸೇತುವೆಯಿಂದ ನದಿಗೆ ಜಿಗಿದ ವಿದ್ಯಾರ್ಥಿನಿ

Related Articles

Back to top button