
ಪ್ರಗತಿವಾಹಿನಿ ಸುದ್ದಿ; ಚಿಕ್ಕಬಳ್ಳಾಪುರ: ಶಾಲೆಗಳಿಲ್ಲದ ಕಾರಣ ಕುರಿ ಮೇಯಿಸಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ಕೆರೆಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಚಿಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದಲ್ಲಿ ನಡೆದಿದೆ.
ದಿಬ್ಬೂರಹಳ್ಳಿ ದರ್ಶನ್ ಬಿನ್ ಮೂರ್ತಿ (15), ಕಾಚಹಳ್ಳಿ ಗ್ರಾಮದ ಶಿವರಾಜ್ ಬಿನ್ ಮಂಜುನಾಥ್ (14) ಮೃತರು.
ಚಿಕ್ಕಮ್ಮನ ಮನೆಗೆ ಬಂದಿದ್ದ ಶಿವರಾಜ್ ತನ್ನ ತಮ್ಮ ದರ್ಶನ್ ಜೊತೆ ಕುರಿ ಮೇಯಿಸಲು ಬಚ್ಚನಹಳ್ಳಿ ಅರಣ್ಯಪ್ರದೇಶಕ್ಕೆ ಹೋಗಿದ್ದಾರೆ. ಈ ವೇಳೆ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಹಿಂಭಾಗದ ಕೆರೆಯಲ್ಲಿ ಈಜಾಡಲು ಹೋಗಿ ನೀರು ಪಾಲಾಗಿದ್ದಾರೆ.




