Kannada NewsLatest

ತಾಳ್ಮೆ ಇದ್ದರೆ ಏನನ್ನೂ ಸಾಧಿಸಬಹುದು-  ಎಂ.ಎನ್. ಹೆಗಡೆ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ

ವಿದ್ಯಾರ್ಥಿ ಜೀವನದಲ್ಲಿ ಶ್ರದ್ಧೆ ಮತ್ತು ತಾಳ್ಮೆ ಅತಿ ಮುಖ್ಯವಾಗಿ ಇರಬೇಕಾದ ಗುಣಗಳು.   ಅದರಿಂದಲೇ ಯಶಸ್ಸಿನ ಮೆಟ್ಟಿಲು ಏರಲು ಸಾಧ್ಯ ” ಎಂದು ನಿವೃತ್ತ ಉಪನ್ಯಾಸಕ ಹಾಗೂ ಯಕ್ಷಗಾನ ತಾಳಮದ್ದಳೆ ಅರ್ಥ ಗಾರ  ಎಂ ಎನ್ ಹೆಗಡೆ ಹೇಳಿದರು.

ಅವರು ಬೆಳಗಾವಿಯ ಎಸ್ ಜಿ ವಿ ಮಹೇಶ ಪದವಿ ಪೂರ್ವ ಕಾಲೇಜು  ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಾತನಾಡಿದರು.

ಕಾಲೇಜಿನ ಪ್ರಾಚಾರ್ಯ  ಎಂ ವಿ ಭಟ್ಟ ಮಾತನಾಡಿ, “ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಆರಂಭಿಸಿ ಏಳು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ್ದೇವೆ.  ಸಿಬ್ಬಂದಿ ಪರಿಶ್ರಮದಿಂದ ದ್ವಿತಿಯ ಪಿಯುಸಿ ಸಿಇಟಿ ಪರಿಕ್ಷೆಯಲ್ಲಿ  ಸಾವಿರದ ಒಳಗಿನ ಹಲವು ರ‍್ಯಾಂಕ್ ಪಡೆಯಲು ಸಹಾಯವಾಯಿತು” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ  ರಾಮಮೋಹನ ಎಚ್ ಕೆ ಮಾತನಾಡಿ “ವಿದ್ಯಾರ್ಥಿಗಳ ಯಶಸ್ಸಿಗೆ ಕೇವಲ ಕಾಲೇಜು ಮತ್ತು ಸಿಬ್ಬಂದಿ ಮಾತ್ರ ಕಾರಣರಲ್ಲ, ಪಾಲಕರೂ ಜವಾಬ್ದಾರರಾಗಿರುತ್ತಾರೆ,” ಎಂದರು.
ವಿದ್ಯಾರ್ಥಿನಿ ಶ್ರಾವಣಿ ಇಳಕಲ್ ಅವಳ ಭರತನಾಟ್ಯದೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಉಪಪ್ರಾಚಾರ್ಯ  ಆನಂದ ಖೋತ್ ಪ್ರಾಸ್ತಾವಿಕ ಮಾತನಾಡಿದರು.  ಮಹೇಶ ಕಲ್ಲೋಳ್ಳಿ ಸ್ವಾಗತಿಸಿದರು.  ಸನ್ಯಾಲ್ ಕಾಮತ್ ಮತ್ತು ಡಾ.ಶ್ರೀನಿವಾಸ ಜಾಧವ ಪರಿಚಯಿಸಿದರು.   ಅಬೀದ ಅಲಿ ಮತ್ತು   ಪ್ರಸನ್ನ ಹೆಗಡೆ ವಾರ್ಷಿಕ ಚಟುವಟಿಕೆ ಮತ್ತು ಸಾಧನೆಯ ಕುರಿತು ಮಾತನಾಡಿದರು.  ರಾಜು ಭಟ್ಟ ಮತ್ತು   ಅಭಿಷೇಕ ಕುಂಬಾರ ನಿರ್ವಹಿಸಿದರು.  ಸುನೀಲ ವೈಕುಂಠೆ ವಂದಿಸಿದರು.

ಹೆಚ್ಚಿನ ಸುದ್ದಿಗಾಗಿ pragativehini.com ನೋಡಿ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button