✍️ ರವಿ ಭಜಂತ್ರಿ, ಬೆಳಗಾವಿ: ಸಾಕ್ಷಿ ಬಿರ್ಜೆ ಬೆಳಗಾವಿ ನಗರದ ರುಕ್ಮಿಣಿ ನಗರದಲ್ಲಿ ವಾಸಿಸುತ್ತಿರುವ ಬಡ ಪ್ರತಿಭಾವಂತ ವಿದ್ಯಾರ್ಥಿನಿ ಹಾಗೂ ಇದೀಗ ಎಂಬಿಬಿಎಸ್ ಸೀಟನ್ನು ಸರ್ಕಾರಿ ಕೋಟಾದಲ್ಲಿ ಬೀದರ್ ನ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಪಡೆದಿರುವ ಭಾಗ್ಯಶಾಲಿ.
ರುಕ್ಮಿಣಿ ನಗರದ ಕನ್ನಡ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಒಂಟಮುರಿಯ ಸರಕಾರಿ ಹೈಸ್ಕೂಲ್ ನಲ್ಲಿ ಮಾಧ್ಯಮಿಕ ಶಿಕ್ಷಣ ಪಡೆದ ಸಾಕ್ಷಿ, ಸುಧಾಮೂರ್ತಿಯವರ ಫೌಂಡೇಶನ್ ಮೂಲಕ ಪಿಯುಸಿಯನ್ನು ಮೈಸೂರಿನಲ್ಲಿ ಉಚಿತವಾಗಿ ಶಿಕ್ಷಣ ಸೌಲಭ್ಯ ಪಡೆದು ವಿಜ್ಞಾನ ವಿಭಾಗದಲ್ಲಿ ಶೇ. 98 ಅಂಕಗಳನ್ನು ಪಡೆದ ಸಾಧಕಿ.
ತಂದೆ ಬಾಳೆಹಣ್ಣಿನ ವ್ಯಾಪಾರ ಮಾಡುವುದು ತಾಯಿ ಅವರಿವರ ಮನೆಯ ಪಾತ್ರೆ ಬಟ್ಟೆ ಕೆಲಸವನ್ನು ಮಾಡುವುದು. ಇಂಥ ಹಿನ್ನೆಲೆಯಲ್ಲೂ ಅರೂಪದ ಸಾಧನೆ ಮಾಡಿದ ಈ ಮಗುವನ್ನು ನಮ್ಮ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ ಹಾಗೂ ಗುರುಬಳಗದ ವತಿಯಿಂದ ಸನ್ಮಾನಿಸಲಾಯಿತು.
‘ಪ್ರತಿಭೆ ಬಡವರ ಗುಡಿಸಲಿನಲ್ಲಿ ಹುಟ್ಟಿ ಅರಮನೆಯಲ್ಲಿ ಬೆಳಗುತ್ತದೆ’ ಎಂಬ ನಾಣ್ಣುಡಿ ಯಂತೆ
ಈ ಮಗು ಇನ್ನಷ್ಟು ಮತ್ತಷ್ಟು ಬೆಳೆಯಲಿ, ಬೆಳಗಲಿ ಎಂಬುದೇ ನಮ್ಮೆಲ್ಲರ ಶುಭ ಹಾರೈಕೆ.
(ಲೇಖಕರು- ಕ್ಷೇತ್ರ ಶಿಕ್ಷಣಾಧಿಕಾರಿಗಳು ಬೆಳಗಾವಿ ನಗರ ವಲಯ)
ಬಾಯಲ್ಲಿ ಅನ್ನದಾತನ ಹೊಗಳಿಕೆ ಅವನೊಂದಿಗೆ ಯಾರೂ ಇಲ್ಲ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ