Latest

9ನೇ ತರಗತಿ ವಿದ್ಯಾರ್ಥಿನಿ ಹಠಾತ್ ಸಾವು: ಇದ್ದ ಒಬ್ಬಳೇ ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ

ಪ್ರಗತಿವಾಹಿನಿ ಸುದ್ದಿ, ಮಂಗಳೂರು – 9ನೇ ತರಗತಿ ವಿದ್ಯಾರ್ಥಿನಿ ಹಠಾತ್ ಸಾವಿಗೀಡಾದ ಘಟನೆ ಬಂಟ್ವಾಳದ ಅಳಿಕೆಯಲ್ಲಿ ನಡೆದಿದೆ.

ಚಂದಾಡಿ ಗ್ರಾಮದ ಗೀತಾ ಹಾಗೂ ವಿನಯ ದಂಪತಿಯ ಪುತ್ರಿ ಅನ್ವಿತಾ ಹೆಗ್ಡೆ ಮೃತಪಟ್ಟಿದ್ದು, ಹೃದಯಾಘಾತ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ.

ಸ್ಥಳೀಯ ಆಂಗ್ಲ ಮಾಧ್ಯಮ ಶಾಲೆಯೊಂದರಲ್ಲಿ ಓದುತ್ತಿದ್ದ ಅನ್ವಿತಾ ತಂದೆ- ತಾಯಿಗೆ ಒಬ್ಬಳೇ ಮಗಳಾಗಿದ್ದಳು. ಮಗಳನ್ನು ಕಳೆದುಕೊಂಡ ದಂಪತಿಯ ಆಕ್ರಂದನ ಮುಗಿಲು ಮುಟ್ಟಿದೆ.

ಅನ್ವಿತಾ ಸಾವಿನ ಹಿನ್ನೆಲೆಯಲ್ಲಿ ಶಾಲೆಗೆ ರಜೆ ಘೋಷಿಸಲಾಗಿದೆ. ಬಾಲಕಿ ಸಾವಿಗೆ ಇಡೀ ಗ್ರಾಮವೇ ಕಣ್ಣೀರು ಹಾಕುತ್ತಿದೆ.

Home add -Advt

ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ

Related Articles

Back to top button