*ಕಾರ್ಖಾನೆಯ ಕಬ್ಬು ನುರಿಸುವ ಕ್ಷಮತೆ ಹೆಚ್ಚಳ: ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ*

ಪ್ರಗತಿವಾಹಿನಿ ಸುದ್ದಿ: ಕಾರ್ಖಾನೆಯ ಕಬ್ಬು ನುರಿಸುವ ಕ್ಷಮತೆಯನ್ನು 8,500 ಟಿಸಿಡಿಯಿಂದ 11,000 ಟಿಸಿಡಿಗೆ ಹೆಚ್ಚಿಸಲಾಗಿದ್ದು ಪ್ರತಿ ದಿನ 14,000 ಟನ್ ಕಬ್ಬು ಕಾರ್ಖಾನೆಗೆ ಬರುವ ಹಾಗೆ ಕಬ್ಬು ಕಟಾವು ಮತ್ತು ಸಾರಿಗೆ ಗುತ್ತಿಗೆದಾರರನ್ನು ನೇಮಿಸಲಾಗಿದೆ. 10 ತಿಂಗಳವರೆಗೆ ಡಿಸ್ಟಿಲರಿ ಘಟಕ ಕಾರ್ಯನಿರ್ವಹಿಸಿ 3.60 ಕೋಟಿ ಲೀಟರ್ ಇಥೆನಾಲ್ ಉತ್ಪಾದಿಸಿದೆ, ರೂ. 210 ಕೋಟಿ ಆದಾಯ ಬಂದಿದೆ. ಡಿಸ್ಟಿಲರಿ ಘಟಕವನ್ನು ಕೂಡ 150 ಕೆಎಲ್ಪಿಡಿಯಿಂದ 200 ಕೆಎಲ್ಪಿಡಿಗೆ ವಿಸ್ತರಿಲಾಗುತ್ತಿದೆ. ಕಾರ್ಖಾನೆಯಲ್ಲಿಯ ಮೊಲಾಸಿಸ್ದಿಂದ ಇಥೆನಾಲ್ ಉತ್ಪಾದನೆ ಮುಗಿದ ನಂತರ ಗ್ರೇನ್ದಿಂದ 100 ಕೆಎಲ್ಪಿಡಿ ಇಥೆನಾಲ್ ಉತ್ಪಾದನೆ ಮುಂದುವರೆಯಲಿದೆ. ಪ್ರೆಸ್ಮಡ್ದಿಂದ ಬಾಯೊಗ್ಯಾಸ್ ಉಪಉತ್ಪನ್ನವನ್ನು ತಯಾರಿಸುವ ಘಟಕ, ಬಗ್ಯಾಸ್ದಿಂದ ಪ್ಯೆಲೆಟ್ಸ್ ತಯಾರಿಸುವ ಘಟಕ ಮತ್ತು ಬೂಡಿಯಿಂದ ಇಟ್ಟಂಗಿ ತಯಾರಿಸುವ ಘಟಕ ಟೆಂಡರ್ ಪ್ರಕ್ರಿಯೆಯಲ್ಲಿದೆ ಎಂದು ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿದರು.
ಸೋಮವಾರ ಜರುಗಿದ ಸ್ಥಳೀಯ ಶ್ರೀ ಹಾಲಸಿದ್ಧನಾಥ ಕೋ-ಆಪರೇಟಿವ್ ಶುಗರ್ ಫ್ಯಾಕ್ಟರಿಯ 2024-25 ಸಾಲಿನ 37ನೇ ವಾರ್ಷಿಕ ಸರ್ವಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
ಕಾರ್ಖಾನೆಯ ಸದಸ್ಯರ ಅಪಘಾತ ವಿಮೆ ಮೊತ್ತವನ್ನು ರೂ. 5 ಲಕ್ಷಗಳಿಂದ ರೂ. 10 ಲಕ್ಷಗಳಿಗೆ ಏರಿಸಲಾಗಿದೆ ಎಂದರು.
ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ಕಾರ್ಖಾನೆ ಸಕ್ಕರೆ ಉತ್ಪಾದನೆಗೆ ಸಿಮಿತ ಉಳಿಯದೇ ಇತರ ಉಪಉತ್ಪನ್ನಗಳನ್ನು ಉತ್ಪಾದಿಸಿ ಹೆಚ್ಚಿನ ಆದಾಯ ಪಡೆಯುತ್ತಿದೆ. ಇದರಿಂದ ಆರ್ಥಿಕವಾಗಿ ಸಧೃಢವಾಗುತ್ತಿದೆ. ಕೆಲವೇ ವರ್ಷಗಳಲ್ಲಿ ಕಾರ್ಖಾನೆ ಅಭಿವೃದ್ಧಿ ಪಥದತ್ತ ಸಾಗಲು ಅಧಿಕಾರಿ ಮತ್ತು ಸಿಬ್ಬಂದಿ ವರ್ಗದ ಪ್ರಾಮಾಣಿಕ ಪರಿಶ್ರಮವಿದೆ, ಅವರೇ ನಮ್ಮ ಶಕ್ತಿ ಎಂದರು.
ದಿವ್ಯಸಾನಿಧ್ಯ ವಹಿಸಿ ಕನೇರಿಯ ಸಿದ್ಧಗಿರಿ ಮಠದ ಅದೃಷ್ಯಕಾಡಸಿದ್ಧೇಶ್ವರ ಸ್ವಾಮಿಜಿ ಮಾತನಾಡಿದರು. ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ಅಪ್ಪಾಸಾಹೇಬ ಶಿರಗಾವೆ, ಮಹಾಸಭೆಯ ವಿಷಯಗಳನ್ನು ಮಂಡಿಸಿದರು. ಸಭೆಯ ಅಧ್ಯಕ್ಷ ಎಂ. ಪಿ. ಪಾಟೀಲ ವಾರ್ಷಿಕ ವರದಿ ವಾಚನ ಮಾಡಿದರು. ರೈತ ಬಂಧುಗಳ ಅನುಕೂಲಕ್ಕಾಗಿ ಕಾರ್ಖಾನೆಯ ಕುರಿತು ವಿವಿಧಿ ಮಾಹಿತಿಗಳನ್ನು ಪಡೆಯಲು ಮೋಬೈಲ್ ಆ್ಯಪ್ಲಿಕೇಶನ್ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಆಶಾಜ್ಯೋತಿ ವಿಶೇಷ ಮಕ್ಕಳ ಶಾಲೆಯ ಅಧ್ಯಕ್ಷ ಜ್ಯೋತಿಪ್ರಸಾದ ಜೊಲ್ಲೆ, ಕಾರ್ಖಾನೆಯ ಉಪಾದ್ಯಕ್ಷ ಪವನಕುಮಾರ ಪಾಟೀಲ, ನಿರ್ದೇಶಕರಾದ ಅಪ್ಪಾಸಾಹೇಬ ಜೊಲ್ಲೆ, ವಿಶ್ವನಾಥ ಕಮತೆ, ಅವಿನಾಶ ಪಾಟೀಲ, ರಾಮಗೊಂಡ ಪಾಟೀಲ, ಸಮೀತ ಸಾಸನೆ, ಜಯಕುಮಾರ ಖೋತ, ಪ್ರಕಾಶ ಶಿಂಧೆ, ರಮೇಶ ಪಾಟೀಲ, ರಾವಸಾಹೇಬ ಫರಾಳೆ, ಶರದ್ ಜಾಂಗಟೆ, ಸುಹಾಸ ಗೂಗೆ, ಗೀತಾ ಪಾಟೀಲ, ವೈಶಾಲಿ ನಿಕಾಡೆ, ರಾಜು ಗುಂದೆಶಾ, ಮಹಾಲಿಂಗ ಕೋಠಿವಾಲೆ, ಮಿಥುನ ಪಾಟೀಲ, ಸರ್ಜೇರಾವ ಪಾಟೀಲ, ಶ್ರೀಕಾಂತ ಕನಗಲಿ, ಯೂನಸ್ ಮುಲ್ಲಾನಿ, ವ್ಯವಸ್ಥಾಪಕ ನಿರ್ದೇಶಕ ಅಪ್ಪಾಸಾಹೇಬ ಶಿರಗಾವೆ, ಕಿರಣ ನಿಕಾಡೆ, ಹೀರಾ ಶುಗರ್ ಅದ್ಯಕ್ಷ ಬಸವರಾಜ ಕಲ್ಲಟ್ಟಿ, ಉಪಾದ್ಯಕ್ಷ ಅಶೋಕ ಪಟ್ಟಣಶೆಟ್ಟಿ, ವಿವಿಧ ಸಂಸ್ಥೆಗಳ ಪದಾಧಿಕಾರಿಗಳು ರೈತರು, ಸದಸ್ಯರು, ಸಿಬ್ಬಂದಿಯವರು ಉಪಸ್ಥಿತರಿದ್ದರು. ನಿರ್ದೇಶಕ ಶ್ರೀಕಾಂತ ಬನ್ನೆ ಸ್ವಾಗತಿಸಿದರು. ನಿರ್ದೇಶಕ ಜಯವಂತ ಭಾಟಲೆ ವಂದಿಸಿದರು.