
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ತಾಲೂಕಿನ ಅಂಬೇವಾಡಿಯ ವ್ಯಕ್ತಿಯೊಬ್ಬರು ಅತಿಯಾದ ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಯಲ್ಲಪ್ಪ ಬಾಬು ತರಳೆ(45) ಮೃತಪಟ್ಟವರು. ಬುಧವಾರ ಬೆಳಗ್ಗೆ ಅವರ ಮೃತದೇಹ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಿತಿ ಮೀರಿದ ಸಾಲ ಮಾಡಿಕೊಂಡಿದ್ದ ಅವರು ಅದನ್ನು ತೀರಿಸಲಾಗದೆ ಹತಾಶೆಯಿಂದ ಮೃತಪಟ್ಟಿರುವುದಾಗಿ ಶಂಕಿಸಲಾಗಿದೆ.
ಅವರಿಗೆ ತಾಯಿ, ಪತ್ನಿ, ಇಬ್ಬರು ಮಕ್ಕಳಿದ್ದಾರೆ. ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆದಿದೆ.
ಶ್ರೀಲಂಕಾ: ತುರ್ತು ಪರಿಸ್ಥಿತಿ ಘೋಷಣೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ