Kannada NewsLatest

ಉಚಿತ ಬೇಸಿಗೆ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಅನಿಲ ಬೆನಕೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜವಾಹರ ಬಾಲಭವನ ಸೋಸೈಟಿ ಬೆಂಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಳಗಾವಿ, ಜಿಲ್ಲಾ ಬಾಲಭವನ ಸಮಿತಿ ಹಾಗೂ ಮಹಿಳಾ ಕಲ್ಯಾಣ ಸಂಸ್ಥೆ ಬೆಳಗಾವಿ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ಉಚಿತ ಬೇಸಿಗೆ ಶಿಬಿರವನ್ನು ಬೆಳಗಾವಿ ಉತ್ತರ ಮತಕ್ಷೇತ್ರ ಶಾಸಕ ಅನಿಲ ಬೆನಕೆ ಅವರ ಅಮೃತ ಹಸ್ತದಿಂದ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಶಾಲಾ ರಜೆಯ ಸಮಯದಲ್ಲಿ ಉಚಿತ ಬೇಸಿಗೆ ಶಿಬಿರವನ್ನು ಹಮ್ಮಿಕೊಂಡಿರುವುದು ತುಂಬಾ ಸಂತೋಷದ ಸಂಗತಿಯಾಗಿದೆ. ಈ ಎರಡು ವರ್ಷಗಳು ಕೊರೊನಾ ಮಾಹಾಮಾರಿಯಿಂದ ಸಣ್ಣ ಮಕ್ಕಳನ್ನು ಹೊರಗಡೆ ಬಿಡದೆ ಮನೆಯಲ್ಲಿ ಉಳಿದ ಕಾರಣ ಪ್ರಾಥಮಿಕ ಕಲಿಕಾ ವಿಷಯದಲ್ಲಿ ಹಿಂದುಳಿದಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಸಣ್ಣ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರ ಕಾರ್ಯಕ್ರಮವು ತುಂಬಾ ಅನುಕುಲಕರವಾಗಿದ್ದು ಇದರಿಂದ ಪ್ರವಾಸಿ ತಾಣಗಳ ಪರಿಚಯ, ಉತ್ತಮ ಆಹಾರ ಪದ್ಧತಿ, ಆಟಗಳನ್ನು ಹಾಗೂ ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸುವುದು ಅವಶ್ಯಕವಾಗಿದೆ ಎಂದು ಹೇಳಿದರು.

ನಂತರದಲ್ಲಿ ಬೆಳಗಾವಿಯ ಬಾಲಭವನದ ಅಭಿವೃದ್ಧಿಗಾಗಿ ಎಲ್ಲಾ ಇಲಾಖೆಯ ಅಧಿಕಾರಿಗಳೊಂದಿಗೆ ಹಾಗೂ ಸಚಿವರೊಂದಿಗೆ ಮಾತನಾಡಿ ಅಭಿವೃದ್ಧಿಯನ್ನು ಕೈಗೊಳ್ಳಲಾಗುವುದೆಂದು ತಿಳಿಸಿದ ಅವರು ಉಚಿತ ಬೇಸಿಗೆ ಶಿಬಿರವನ್ನು ಆಯೋಜಿಸಿದ ಅಧಿಕಾರಿಗಳಿಗೆ ಹಾಗೂ ಜವಾಹರ ಬಾಲಭವನ ಸೋಸೈಟಿ ಬೆಂಗಳೂರು ಸದಸ್ಯರಾದ ಶ್ರೀಮತಿ ಲೀನಾ ಟೋಪಣ್ಣವರ ಇವರಿಗೆ ಧನ್ಯವಾದವನ್ನು ಅರ್ಪಿಸಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷರಾದ ಶ್ರೀಮತಿ ಲೀನಾ ಟೋಪಣ್ಣವರ (ಸದಸ್ಯರು, ಜವಾಹರ ಬಾಲಭವನ ಸೋಸೈಟಿ ಬೆಂಗಳೂರು), ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಬಾಲಭವನ ಸಮಿತಿ ಬೆಳಗಾವಿ ಅಧ್ಯಕ್ಷರಾದ ದರ್ಶನ ಎಚ್.ವ್ಹಿ.,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೆಶಕರಾದ ಬಸವರಾಜ ಎ.ಎಮ್ ಹಾಗೂ ಇತರ ಅಧಿಕಾರಿಗಳು ಮತ್ತು ಮಕ್ಕಳು ಉಪಸ್ಥಿತರಿದ್ದರು.

ಜೊಲ್ಲೆ ಉದ್ಯೋಗ ಸಮೂಹ ವತಿಯಿಂದ ರಂಗೋಲಿ ಹಾಗೂ ಭವ್ಯ ಸ್ಥಬ್ದ ಚಿತ್ರಣ ಸ್ಪರ್ಧೆ; ಪ್ರತಿ ಸ್ಪರ್ಧಿಗೆ 5000 ಬಹುಮಾನ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button