
ಬಾಳೆ ಕಾಯಿ ತವಾ ಪ್ರೈ

ಬೇಕಾದ ಸಾಮಗ್ರಿಗಳು:
ದಪ್ಪಬಾಳೆಕಾಯಿ(ಪಲ್ಯದ ಬಾಳೆಕಾಯಿ) 1, ಅಚ್ಚಖಾರದಪುಡಿ 2 ಚಮಚ, ಅರಿಶಿಣಪುಡಿ ಅರ್ಧ ಚಮಚ, ಉಪ್ಪು ರುಚಿಗೆ,ಇಂಗಿನ ಪುಡಿ ಕಾಲುಚಮಚ, ಸಣ್ಣರವೆ 4 ರಿಂದ 5 ಚಮಚ, ಸ್ವಲ್ಪ ಎಣ್ಣೆ.
ಮಾಡುವ ವಿಧಾನ:
ಬಾಳೆಕಾಯಿಯನ್ನು ಸಿಪ್ಪೆತೆಗೆದು ತೆಳ್ಳಗೆ ಕತ್ತರಿಸಿ ನೀರಿನಲ್ಲಿ ಹಾಕಿ ಇಡಬೇಕು. ಖಾರದಪುಡಿ, ಅರಿಶಿಣ, ಉಪ್ಪು, ಇಂಗು ಸೇರಿಸಿ 1 ಟೀ ಚಮಚದಸ್ಟು ನೀರನ್ನು ಸೇರಿಸಿ ಪೇಸ್ಟತರಹ ಮಾಡಬೇಕು. ಮೊದಲು ಹೆಚ್ಚಿಟ್ಟ ಬಾಳೆಕಾಯಿಗೆ ಈ ಪೇಸ್ಟನ್ನು ಸವರಬೇಕು. ಇದನ್ನು ರವಾದಲ್ಲಿ ಹೊರಲಾಡಿಸಿ ಕಾದ ತವಾದಲ್ಲಿ ಸ್ವಲ್ಪ ಎಣ್ಣೆಹಾಕಿ ಬೇಯಿಸಬೇಕು. ಹಾಗೆ ಎರಡು ಕಡೆ ತಿರುವಿ ಬೇಯಿಸಬೇಕು.ತವಾಪ್ರೈ ಸವಿಯಲು ತಯಾರಾಗಿದೆ.(ಇದೇ ರೀತಿ ಬದನೆ ಕಾಯಿ, ಆಲುಗಡ್ಡೆಯಲ್ಲಿ ಯೂ ಸಹ ಮಾಡಬಹುದು)
ಸಹನಾ ಭಟ್
ಸಹನಾಸ್ ಕಿಚನ್